ಸಾಗರದಲ್ಲಿ ನಗದು, ಚಿನ್ನಾಭರಣ ಲೂಟಿ | Theft

ಸಾಗರದ ಗಾಂಧಿನಗರದಲ್ಲಿ ನಂದನಕುಮಾರ್ ಕುಟುಂಬದವರಿಂದ ಎಸ್ಪಿ ನಿಖಿಲ್ ಮಾಹಿತಿ ಪಡೆಯುತ್ತಿರುವುದು.
ಸಾಗರದ ಗಾಂಧಿನಗರದಲ್ಲಿ ನಂದನಕುಮಾರ್ ಕುಟುಂಬದವರಿಂದ ಎಸ್ಪಿ ನಿಖಿಲ್ ಮಾಹಿತಿ ಪಡೆಯುತ್ತಿರುವುದು.
Published on
ಸಾಗರ: ಪಟ್ಟಣದ ಗಾಂಧಿ ನಗರದಲ್ಲಿ ಮನೆಯ ಬಾಗಿಲು ಮುರಿದು ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳವು ಮಾಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
ಗಾಂಧಿನಗರದ ನಂದನಕುಮಾರ್ ಅವರ ಕುಟುಂಬ ಏ.25ರಿಂದ ಮನೆಯಲ್ಲಿ ಇರಲಿಲ್ಲ. ಇದೇ ಸಮಯದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ ಐದೂವರೆ ಕೆ.ಜಿ. ಬೆಳ್ಳಿ ವಸ್ತುಗಳು, 2 ಲಕ್ಷ ರೂ. ನಗದು, 340 ಗ್ರಾಂನ ಬಂಗಾರದ ನೆಕ್ಲೇಸ್, ಉಂಗುರ, ತಾಳಿಸರ, ಬಳೆ ಸೇರಿ ಸುಮಾರು 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ನಂದನಕುಮಾರ್ ಕುಟುಂಬ ಗುರುವಾರ ಬೆಳಗ್ಗೆ ವಾಪಸ್ ಬಂದಾಗ ಮನೆಯಲ್ಲಿ ಕಳವು ಆಗಿರುವುದು ಗೊತ್ತಾಗಿದೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net