ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 7 ಚಾಲಕರ ಮೇಲೆ ಪ್ರಕರಣ
ವಿಮೆ, ಎಮಿಷನ್ ರಿಪೋಟ್, ಫಿಟ್‌ನೆಸ್ ಸರ್ಟಿಫಿಕೇಟ್ ಇಟ್ಟುಕೊಳ್ಳುವಂತೆ ಸೂಚನೆ
ಶಿವಮೊಗ್ಗ: ಸಂಚಾರ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ನಗರಾದ್ಯಂತ ಶಾಲಾ, ಕಾಲೇಜು ವಾಹನಗಳ ತಪಾಸಣೆ ನಡೆಸಿದ್ದು, ಈ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ(Drunk Driving) ಮಾಡುತ್ತಿದ್ದ 7 ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರ ಪೊಲೀಸರು(Traffic Police) ಕಾರ್ಯಾಚರಣೆ ನಡೆಸಿದರು. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 457 ವಾಹನಗಳು, ಬಸ್‌ಗಳನ್ನು ತಡೆದು ತಪಾಸಣೆ ನಡೆಸಿದರು. ಚಾಲಕರು ಮದ್ಯ ಸೇವನೆ ಮಾಡಿರುವ ಕುರಿತು ಪರಿಶೀಲಿಸಿದರು.
ಈ ಸಂದರ್ಭ 7 ಚಾಲಕರು ಮದ್ಯಸೇವನೆ ಮಾಡಿರುವುದು ದೃಢಪಟ್ಟಿದೆ. ಇದೇ ವೇಳೆ ಶಾಲಾ ವಾಹನದ ವಿಮೆ, ಎಮಿಷನ್ ರಿಪೋಟ್(Emission Report) ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್(Fitness Certificate) ಅನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು. ವಾಹನಗಳ ಸುಸ್ಥಿತಿ ಬಗ್ಗೆಯೂ ಪರಿಶೀಲಿಸಿದರು.