ಶಿಕ್ಷಣದಿಂದ ಸ್ವಸ್ಥ ಸಮಾಜ ನಿರ್ಮಾಣ

ಸೊರಬ ತಾಲೂಕಿನ ಅಂಕರವಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕಿ ಪುಷ್ಪಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗೌಸ್ ಅಲಿ, ಜಯಶೀಲ ಗೌಡ, ಅನ್ಸರ್, ಅಬು ಸಯೀದ್ ಇತರರಿದ್ದರು.
ಸೊರಬ ತಾಲೂಕಿನ ಅಂಕರವಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕಿ ಪುಷ್ಪಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗೌಸ್ ಅಲಿ, ಜಯಶೀಲ ಗೌಡ, ಅನ್ಸರ್, ಅಬು ಸಯೀದ್ ಇತರರಿದ್ದರು.
Published on
ಸೊರಬ: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಹೇಳಿದರು.
ತಾಲೂಕಿನ ಅಂಕರವಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕಿ ಪುಷ್ಪಾ ಅವರಿಗೆ ಶಾಲೆಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುವ ಜತೆ ಭಾಷೆ ಮಹತ್ವದ ಅರಿವು ಮೂಡಿಸುವುದು ಶ್ರೇಷ್ಠ ಕಾರ್ಯ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕಿ ಪುಷ್ಪಾ ಮಾತನಾಡಿ, ತಾಲೂಕಿನಲ್ಲಿ 30 ವರ್ಷ ಸೇವೆ ಸಲ್ಲಿಸಿರುವುದು  ತೃಪ್ತಿ ತಂದಿದೆ. ಅಂಕರವಳ್ಳಿ ಉರ್ದು ಶಾಲೆಯಲ್ಲಿ ಉತ್ತಮ ವಾತಾವರಣ ಇದ್ದು, ಕನ್ನಡ ಭಾಷೆಯನ್ನು ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯರ ಸಭೆ ನಡೆಸಲಾಯಿತು. ಹಳೇ ವಿದ್ಯಾರ್ಥಿಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಅನ್ಸರ್, ಉಪಾಧ್ಯಕ್ಷೆ ರೇಷ್ಮಾ, ಉರ್ದು ಕ್ಲಸ್ಟರ್ ಸಿಆರ್‌ಪಿ ಅಬು ಸಯೀದ್, ಮುಖ್ಯಶಿಕ್ಷಕ ಗೌಸ್ ಅಲಿ, ಶಿಕ್ಷಕರಾದ ಫಿರ್ದೋಸ್ ಖಾನಂ, ನಾಹೀದಾ, ಅಬೀನಾ, ತಮನ್, ಯೂಸೂಫ್, ಕಾವ್ಯಾ, ಅಜ್ಜಪ್ಪ, ಪ್ರಭಾಕರ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೈಯದ್ ಯಾಸೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net