ರಾಜಕಾರಣಿಗಳಿಗೆ ಬಿಎಸ್‌ವೈ ಬದುಕು ಪಾಠ | BSY fan festival
ಶಾಸಕ ಆರಗ ಜ್ಞಾನೇಂದ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಜಿ ಸಿಎಂ ಬಿಎಸ್‌ವೈ ರಾಜಕಾರಣಕ್ಕೆ 50 ವರ್ಷ
ಚಿತ್ರದುರ್ಗದಲ್ಲಿ ಅಭಿಮಾನೋತ್ಸವಕ್ಕೆಸಾವಿರಾರು ಜನ
ಶಿವಮೊಗ್ಗದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾಹಿತಿ
ಶಿವಮೊಗ್ಗ: ಭವಿಷ್ಯದಲ್ಲಿ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಳ್ಳುವವರು ಹಾಗೂ ಪ್ರಸ್ತುತ ರಾಜಕಾರಣದಲ್ಲಿ ಇರುವವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(B.S.Yediyurappa) ಅವರ ಹೋರಾಟದ ಬದುಕು ಉತ್ತಮ ಪಾಠವಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದ ಪಕ್ಕದಲ್ಲಿರುವ ಮೈದಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಕೀಯ ಪ್ರವೇಶಿಸಿ 50 ವರ್ಷ ಪೂರ್ಣಗೊಳಿಸಿದ ಸಂಭ್ರಮ ಹಿನ್ನೆಲೆಯಲ್ಲಿ ಮೇ 9ರಂದು ಬೆಳಗ್ಗೆ 11ಕ್ಕೆ ಬಿಎಸ್‌ವೈ ಅಭಿಮಾನೋತ್ಸವ(BSY fan festival) ಕಾರ್ಯಕ್ರಮ ಆಯೋಜಿಸಲಾಗಿದೆ. 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಜಿಲ್ಲೆಯಿಂದ 60 ಸಾವಿರಕ್ಕೂ ಅಧಿಕ ಅಭಿಮಾನಿಗಳು ತೆರಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ರಾಜಕೀಯಕ್ಕೆ ಬರುವ ಅನೇಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರು 50 ವರ್ಷದ ರಾಜಕೀಯ ಜೀವನ(Political career)ದಲ್ಲಿ ಎಂದಿಗೂ ಅಡ್ಡದಾರಿ ಹಿಡಿದವರಲ್ಲ. ಸಿದ್ಧಾಂತ ಮತ್ತು ಹೋರಾಟದ ಮೂಲಕ ರಾಜಕೀಯ ಮಾರ್ಗದ ಮೂಲಕ ಯಶಸ್ಸನ್ನು ಕಂಡುಕೊಂಡವರು. ಈಗ ಜಾತಿ ಮತ್ತು ಹಣದ ಮೂಲಕ ರಾಜಕಾರಣ ಮಾಡುವುದು ಸಾಮಾನ್ಯವಾಗಿದೆ. ಯಡಿಯೂರಪ್ಪ ಅವರು ಅಂತಹ ರಾಜಕಾರಣಕ್ಕೆ ಬಲಿಯಾಗದೆ ಹೋರಾಟದ ಮೂಲಕ ರೂಪುಗೊಂಡರು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದವರು ಎಂದು ಶ್ಲಾಘಿಸಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕನಾಯ್ಕ, ಮಾಜಿ ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಮಂಗೋಟೆ ರುದ್ರೇಶ್, ಸಂತೋಷ್ ಬಳ್ಳೆಕೆರೆ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
"
ಬಿಎಸ್‌ವೈ ಅಭಿಮಾನೋತ್ಸವವು ಪಕ್ಷಾತೀತವಾಗಿದ್ದು, ಸಮಾವೇಶವು ಮುಂದೆ ಅನೇಕರ ಮೇಲೆ ಪರಿಣಾಮ ಬೀರಬಹುದು. ಅಧಿಕಾರದಲ್ಲಿ ಇಲ್ಲದಿದ್ದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಅಭಿಮಾನಕ್ಕಾಗಿ ಲಕ್ಷಾಂತರ ಜನರು ಸೇರುತ್ತಿರುವುದು ಸಣ್ಣ ವಿಷಯವಲ್ಲ.