ಸಾಗರ ತಾಲೂಕಿನ ಹಸಿರುಮಕ್ಕಿ ಸೇತುವೆ ಸ್ಥಳಕ್ಕೆ ಸಂಯುಕ್ತ ರೈತ ಸಂದ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಯ್ಸಳ ಗಣಪತಿಯಪ್ಪ, ಭದ್ರೇಶ್, ಎಂ.ಬಿ.ಮಂಜಪ್ಪ, ಜಿನೇಶ್ಕುಮಾರ್ ಇತರರಿದ್ದರು.
ಸಾಗರ: ತಾಲೂಕಿನ ಹಸಿರುಮಕ್ಕಿ ಸೇತುವೆ ಕಾಮಗಾರಿ 2017ರಲ್ಲಿ ಆರಂಭವಾಗಿದ್ದರೂ ಈತನಕ ಉದ್ಘಾಟನೆಯಾಗಿಲ್ಲ. ಸೇತುವೆ ನಿರ್ಮಾಣಕ್ಕೆ ಎಂಟು ವರ್ಷ ಬೇಕಾಗುತ್ತದೆಯೇಎಂದು ಸಂಯುಕ್ತ ರೈತ ಸಂದ ಪ್ರಮುಖ ಹೊಯ್ಸಳ ಗಣಪತಿಯಪ್ಪ ಪ್ರಶ್ನಿಸಿದ್ದಾರೆ.
ಸಾಗರ ತಾಲೂಕಿನ ಹಸಿರುಮಕ್ಕಿ ಸೇತುವೆ ಸ್ಥಳಕ್ಕೆಸಂಯುಕ್ತ ರೈತ ಸಂದ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿದ ಅವರು, ಶೇ.90ರಷ್ಟು ಸೇತುವೆ ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಯನ್ನು ತಣ ಮುಗಿಸಿ ಸಾರ್ವಜನಿಕರಿಗೆ ಸೇತುವೆ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಹಸಿರುಮಕ್ಕಿ ಸೇತುವೆ ದಣ ಕನ್ನಡ ಜಿಲ್ಲೆ ಮತ್ತು ಮಲೆನಾಡಿಗೆ ಸಂಪರ್ಕ ಬೆಸೆಯುವುದರಿಂದ ಜನರು ಈ ಹತ್ತಿರದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಷ್ಟು ದಿನ ಮಳೆ ಇಲ್ಲದೆ ಇರುವುದರಿಂದ ಲಾಂಚ್ ಸೇವೆ ಸಹ ಸ್ಥಗಿತಗೊಂಡಿದೆ. ಎರಡು ದಿನಗಳಿಂದ ಲಾಂಚ್ ಪುನರಾರಂಭಗೊಂಡಿದೆ. ಶಾಸಕರು ಮೂರ್ನಾಲ್ಕು ತಿಂಗಳಿನಲ್ಲಿ ಸೇತುವೆ ಕಾಮಗಾರಿ ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ರೈತ ಸಂದ ಪ್ರಧಾನ ಕಾರ್ಯದರ್ಶಿ ಭದ್ರೇಶ್ ಬಾಳಗೋಡು ಮಾತನಾಡಿ, ಕಾಮಗಾರಿ ಐದು ವರ್ಷಗಳಲ್ಲಿ ಮುಗಿಸಬೇಕು ಎಂದು ನಿಯಮ ಇರುತ್ತದೆ. ಆದರೆ ಒಂಬತ್ತು ವರ್ಷವಾದರೂ ಸೇತುವೆ ಪೂರ್ಣಗೊಂಡಿಲ್ಲ. ಮುಳುಗಡೆ ಸಂತ್ರಸ್ತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಸೇತುವೆ ನಿರ್ಮಾಣವಾದರೆ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮಳೆ ಪ್ರಮಾಣ ಕಡಿಮೆ ಇರುವುದರಿಂದ ಲಾಂಚ್ ಸೇವೆ ನಿಂತರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಸೇತುವೆಯನ್ನು ಅತಿಶ್ರೀವಾಗಿ ಉದ್ಘಾಟನೆಗೊಳಿಸಬೇಕು ಎಂದು ಒತ್ತಾಯಿಸಿದರು.