ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಬ್ರಹ್ಮಶ್ರೀ | Narayana Guru Jayanti

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸಲಾಯಿತು. ರತ್ನಾಕರ ಶೆಟ್ಟಿ, ಮುಡುಬಾ ರಾಘವೇಂದ್ರ, ವಿಶಾಲ್‌ಕುಮಾರ್ ಇದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸಲಾಯಿತು. ರತ್ನಾಕರ ಶೆಟ್ಟಿ, ಮುಡುಬಾ ರಾಘವೇಂದ್ರ, ವಿಶಾಲ್‌ಕುಮಾರ್ ಇದ್ದರು.
Published on
ತೀರ್ಥಹಳ್ಳಿ: ಜಾತಿ ಆಧಾರದ ಮೇಲೆ ಧಾರ್ಮಿಕ ಹಕ್ಕುಗಳನ್ನು ನಿರ್ಬಂಧಿಸುವ ಪದ್ಧತಿಗೆ ಸವಾಲು ಹಾಕಿ ಮಾನವ ಕುಲ ಒಂದೇ ಎಂದು ಸಾರಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಪಾಲನೆ ಇಂದು ಅತಿ ಅಗತ್ಯ ಎನಿಸಿದೆ ಎಂದು ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಬೊಮ್ಮರಸಯ್ಯನ ಅಗ್ರಹಾರದಲ್ಲಿರುವ ಗುರುಗಳ ಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧ್ಯಾತ್ಮಿಕ ತತ್ವಜ್ಞಾನಿಗಳಾಗಿದ್ದ ನಾರಾಯಣ ಗುರುಗಳು ಶಿಕ್ಷಣ, ಸ್ವಚ್ಛತೆ, ಸಂಘಟನೆಗೆ ಆದ್ಯತೆ ನೀಡಿದ್ದರು. ಜಾತಿ, ಧರ್ಮದ ಹೆಸರಿನಲ್ಲಿ ಪ್ರಸ್ತುತ ಸಮಾಜದಲ್ಲಿ ತಾರಕ್ಕೇರಿರುವ ಪಿಡುಗನ್ನು ನಿವಾರಿಸಲು ದಾರ್ಶನಿಕರ ತತ್ವಗಳ ಅನುಸರಣೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಅಸ್ಪಶ್ಯತೆ ವಿರುದ್ಧ ಜನಜಾಗೃತಿ ಮೂಡಿಸಲು ಶ್ರಮಿಸಿದವರು. ಗುರುಗಳ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡೋಣ ಎಂದು ಹೇಳಿದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಗೌರವಾಧ್ಯಕ್ಷ ಮುಡುಬಾ ರಾಘವೇಂದ್ರ, ತಾಲೂಕು ಅಧ್ಯಕ್ಷ ವಿಶಾಲ್‌ಕುಮಾರ್, ಉಪ ತಹಸೀಲ್ದಾರ್ ಪ್ರದೀಪ್, ಕಂದಾಯ ಇಲಾಖೆಯ ಸುಧೀರ್, ಸುರಥಕುಮಾರ್, ಸಂಘದ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ್, ಟಿ.ಎನ್.ಅನಿಲ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net