ಅಪಘಾತದಲ್ಲಿ ಬೈಕ್ ಸವಾರ ಸಾವು | hit and run

ಮೃತ ವೀರೇಶ್
ಮೃತ ವೀರೇಶ್
Published on
ಆಯನೂರು: ರಾಷ್ಟ್ರೀಯ ಹೆದ್ದಾರಿಯ ವೀರಣ್ಣನ ಬೆನವಳ್ಳಿ ಗ್ರಾಮದ ಬಳಿ ಸೋಮವಾರ ಬೆಳಗಿನಜಾವ ಹಿಟ್ ಆಂಡ್ ರನ್‌ಗೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಡಿಕೊಪ್ಪದ ವೀರೇಶ್ (23) ಮೃತ ಸವಾರ. ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗದಲ್ಲಿ ಖಾಸಗಿ ಬಸ್ ಚಾಲಕನಾಗಿದ್ದ ಎನ್ನಲಾಗಿದೆ. ಆಯನೂರು ಬಳಿ ಬಸ್ ಪಂಚರ್ ಆಗಿದೆ ಸರಿಪಡಿಸಬೇಕು ಎಂದು ಸ್ನೇಹಿತನ ಬೈಕ್‌ನಲ್ಲಿ ಆಯನೂರಿಗೆ ಬಂದಿದ್ದ. ಬೆಳಗಿನಜಾವ 4 ಗಂಟೆಗೆ ಶಿವಮೊಗ್ಗಕ್ಕೆ ವಾಪಸ್ ಹೋಗುವಾಗ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕಾರಣವಾದ ವಾಹನದ ಸುಳಿವಿಗಾಗಿ ಪೊಲೀಸರು ಸಿಸಿ ಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net