ಅಪಘಾತದಲ್ಲಿ ಬೈಕ್ ಸವಾರರು ಸಾವು | accident

ಅಪಘಾತದಲ್ಲಿ ಬೈಕ್ ಸವಾರರು ಸಾವು
ಅಪಘಾತದಲ್ಲಿ ಬೈಕ್ ಸವಾರರು ಸಾವು
Published on
ತೀರ್ಥಹಳ್ಳಿ: ಪಟ್ಟಣದ ದೊಡ್ಡಮನೆಕೇರಿ ಎಪಿಎಂಸಿ ಯಾರ್ಡ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಗ್ಯಾಸ್ ಸಿಲಿಂಡರ್ ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಪಟ್ಟಣದ ಇಂದಿರಾನಗರ ನಿವಾಸಿಗಳಾದ ಸುದೀಪ್ (25) ಸುಧೀಶ್ (30) ಸಾವಿಗೀಡಾದವರು. ಯುವಕರು ತಡರಾತ್ರಿ 1.30ಕ್ಕೆ ಪೇಟೆ ಕಡೆಯಿಂದ ಪಲ್ಸರ್ ಬೈಕಿನಲ್ಲಿ ಮನೆ ಕಡೆ ಸಾಗುತ್ತಿದ್ದರು. ಎಪಿಎಂಸಿ ಯಾರ್ಡ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಷೆಡ್‌ಗೆ ತಿರುಗುತ್ತಿದ್ದ ಗ್ಯಾಸ್ ಸಿಲಿಂಡರ್ ಲಾರಿಯ ಎಡಭಾಗಕ್ಕೆ ಬೈಕ್ ಅಪ್ಪಳಿಸಿದಾಗ ಲಾರಿಯ ಹಿಂಭಾಗದ ಚಕ್ರಕ್ಕೆ ಇಬ್ಬರೂ ಸಿಲುಕಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅಸುನೀಗಿದ್ದರು ಎನ್ನಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net