ಟೆಂಪೋ ನಿಲ್ದಾಣ ಬಳಿ ಅಪಘಾತದಲ್ಲಿ ಬೈಕ್ ಸವಾರ ಸಾವು | Bike accident

ಪಶ್ಚಿಮ ಸಂಚಾರ ಠಾಣೆ
ಪಶ್ಚಿಮ ಸಂಚಾರ ಠಾಣೆ
Published on
ಶಿವಮೊಗ್ಗ: ನಗರದ ಎನ್.ಟಿ.ರಸ್ತೆಯ ಟೆಂಪೋ ನಿಲ್ದಾಣ(Tempo Station) ಬಳಿ ಮಂಗಳವಾರ ರಾತ್ರಿ ಎರಡು ಬೈಕ್‌ಗಳ ಅಪಘಾತ(Accident)ದಲ್ಲಿ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾನೆ. 
ಮಾರ್ನಮಿಬೈಲ್‌ನ ಗುರುರಾಜ್(35) ಮೃತ. ಹೊಳೆಹೊನ್ನೂರಿನ ಮುರಳಿ ಗಾಯಗೊಂಡಿದ್ದು, ಮಣಿಪಾಲ್ (Manipal)ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುರಳಿ ಫೋಟೋಗ್ರಾಫರ್(Photographer) ಆಗಿದ್ದು, ಎನ್.ಟಿ.ರಸ್ತೆಯ ಬೈಪಾಸ್ ಕಡೆಯಿಂದ ಬರುತ್ತಿದ್ದಾಗ ಟೆಂಪೋ ನಿಲ್ದಾಣದ ಒಳಗಡೆಯಿಂದ ಗುರುರಾಜ್ ಮತ್ತೊಂದು ಬೈಕ್‌ನಲ್ಲಿ ಬಂದಿದ್ದು ಈ ವೇಳೆ ಅಪಘಾತ ಸಂಭವಿಸಿದೆ. 
ಮೂಲತಃ ತೀರ್ಥಹಳ್ಳಿಯ ಗುರುರಾಜ್ ಶಿವಮೊಗ್ಗದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಮಾರ್ನಮಿಬೈಲ್‌(Manrnamibail)ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net