ಮಾದಕ ವಸ್ತುಗಳ ದಾಸರಾದರೆ ಜೀವನ ನಾಶ

 ಸಾಗರದಲ್ಲಿ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಆಯೋಜಿದ್ದ ಮ್ಯಾರಥಾನ್​ ವಿಜೇತರಿಗೆ ಪೊಲೀಸ್​ ಉಪ ಅಧೀಕ ಡಾ. ಬೆನಕಪ್ರಸಾದ್​ಬಹುಮಾನ ವಿತರಿಸಿದರು.
ಸಾಗರದಲ್ಲಿ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಆಯೋಜಿದ್ದ ಮ್ಯಾರಥಾನ್​ ವಿಜೇತರಿಗೆ ಪೊಲೀಸ್​ ಉಪ ಅಧೀಕ ಡಾ. ಬೆನಕಪ್ರಸಾದ್​ಬಹುಮಾನ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಗೃತಿಗಾಗಿ ಪೊಲೀಸ್​ ಇಲಾಖೆಯಿಂದ ಮ್ಯಾರಥಾನ್​
  • ಸಾಗರ ಡಿವೈಎಸ್ಪಿ ಡಾ. ಬೆನಕಪ್ರಸಾದ್​ ಹೇಳಿಕೆ
  • ಮಾದಕ ವಸ್ತುಗಳ ದಾಸರಾದರೆ ಜೀವನ ನಾಶ
ಸಾಗರ: ಮಕ್ಕಳು ಓದುವ ಜತೆಗೆ ಉಳಿದ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಪಾಲಕರು ಗಮನ ಹರಿಸಬೇಕು. ಸಮಾಜದ ಜತೆ ಬೆರೆತು ವ್ಯವಸ್ಥಿತವಾಗಿ ಮುನ್ನಡೆಯಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಸಾಗರ ಉಪವಿಭಾಗದ ಡಿವೈಎಸ್ಪಿ ಡಾ. ಬೆನಕಪ್ರಸಾದ್​ ಹೇಳಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್​, ಸಾಗರ ಉಪವಿಭಾಗ, ಸಾಗರ ಪೊಲೀಸ್​ ಠಾಣೆಯಿಂದ ಗುರುವಾರ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ 5 ಕಿ.ಮೀ ಮ್ಯಾರಥಾನ್​ಗೆ ಚಾಲನೆ ನೀಡಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಾರೆ. ಆದರೆ ಮಕ್ಕಳು ಸುಖ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವುದು ಆತಂಕ ಮೂಡಿಸುತ್ತಿದೆ. ಇದರಿಂದ ಆಗುವ ಅಪಾಯ ಮತ್ತು ಅನಾಹುತಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ಮಾದಕ ವಸ್ತುಗಳಿಗೆ ದಾಸರಾಗದೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜುಗಳಲ್ಲಿ ಅಭಿಯಾನ, ಪ್ರಾತ್ಯಕೆಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇಂದಿನ ಮ್ಯಾರಥಾನ್​ನಲ್ಲಿ ಮಳೆ ಮಧ್ಯೆಯೂ ಯುವಕರು ಯೋಗಪಟುಗಳು ಹಾಗೂ ನಮ್ಮ ಇಲಾಖೆಯಿಂದಲೂ ಹೆಚ್ಚಿನ ಜನರು ಪಾಲ್ಗೊಂಡು ಕಾರ್ಯಕ್ರಮದ ಮಹತ್ವ ಪರಿಚಯಿಸಿದ್ದಾರೆ. ಮ್ಯಾರಥಾನ್​ನಲ್ಲಿ ವಿಜೇತರಿಗೆ ಬಹುಮಾನವನ್ನೂ ನೀಡಿ ಪ್ರೋತ್ಸಾಹಿಸಿದ್ದೇವೆ ಎಂದರು.
ಪೊಲೀಸ್​ ಅಧಿಕಾರಿ ಪುಲ್ಲಯ್ಯ ರಾಥೋಡ್​, ಶಾಂತರಾಜ್​, ಪ್ರವಿಣ್​, ನಾಗರಾಜ್​ ಇದ್ದರು.
ಬಹುಮಾನ ವಿಜೇತರು
ಕೇಶವ್​, ತಾರೇಶ್​ ಹಾಗೂ ನಿರಂಜನ್​ ಸಾರ್ವಜನಿಕ ವಿಭಾಗದಲ್ಲಿ ಬಹುಮಾನಗಳನ್ನು ಪಡೆದರು. ಪೊಲೀಸ್​ ವಿಭಾಗದಲ್ಲಿ ರಾಮನ ಗೌಡ ಪಾಟೀಲ್​, ವಿಶ್ವನಾಥ್​, ನಿಂಗರಾಜ್​, 45ವರ್ಷ ಮೇಲ್ಪಟ್ಟ ಪೊಲೀಸ್​ ಸಿಬ್ಬಂದಿ ವಿಭಾಗದಲ್ಲಿ ತಾರಾನಾಥ್​, ಶಂಕರ್​, ಶಿವರುದ್ರಯ್ಯ ಬಹುಮಾನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net