ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ

ಜೋಗ&ಕಾರ್ಗಲ್​ ಪಪಂನ ನೂತನ ರಂಗಮಂದಿರ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಹಾಯಧನ ವಿತರಿಸಿದರು. ರಶ್ಮಿ, ಎಂ.ಕೆ.ಸುರೇಶ್​, ಸಂತೋಷ್​ ಕುಮಾರ್​, ಎಂ.ರಾಜು ಮುಂತಾದವರಿದ್ದರು.
ಜೋಗ&ಕಾರ್ಗಲ್​ ಪಪಂನ ನೂತನ ರಂಗಮಂದಿರ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಹಾಯಧನ ವಿತರಿಸಿದರು. ರಶ್ಮಿ, ಎಂ.ಕೆ.ಸುರೇಶ್​, ಸಂತೋಷ್​ ಕುಮಾರ್​, ಎಂ.ರಾಜು ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಣೆ
  • ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
  • ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
ಕಾರ್ಗಲ್​: ಜೋಗ-&ಕಾರ್ಗಲ್​ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆ ರಿಪೇರಿ, ವೈದ್ಯಕಿಯ ನೆರವು ಸೇರಿ 86 ಕುಟುಂಬಗಳ ಫಲಾನುಭವಿಗಳಿಗೆ 12 ಲ ರೂ ಸಹಾಯಧನ ನೀಡಲಾಗಿದೆ. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜೋಗ&ಕಾರ್ಗಲ್​ ಪಟ್ಟಣ ಪಂಚಾಯಿತಿಯ ನೂತನ ರಂಗಮಂದಿರದ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಣೆ ನೆರವೇರಿಸಿ ಮಾತನಾಡಿದರು.
ಬಿಸಿಲಿನ ಝಳ ಹೆಚ್ಚಾಗುತ್ತಿದ್ದು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹನ್ನೊಂದು ವಾರ್ಡ್​ಗಳಲ್ಲೂ ಕುಡಿಯುವ ನೀರಿಗೆ ಜನತೆಗೆ ಯಾವುದೇ ತೊಂದರೆ ಆಗದಂತೆ ಜಾಗೃತರಾಗಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್​ ಮೂಲಕವೂ ನೀರನ್ನು ಪೂರೈಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕೆಪಿಸಿ ತಮ್ಮ ಕಾಲನಿಯ ಜತೆಗೆ ಉಳಿದ ಭಾಗದ ಸ್ವಚ್ಛತೆ ಹಾಗೂ ಬೀದಿ ದೀಪಗಳ ನಿರ್ವಹಣೆಯನ್ನು ಪ್ರತ್ಯೇಕವಾಗಿ ನೋಡದೆ ಗಮನ ಹರಿಸಬೇಕು. ಜೋಗ, ಕಾರ್ಗಲ್​ ಭಾಗದಲ್ಲಿ ಕೆಪಿಸಿ ನಿಗಮದ ಸಾಕಷ್ಟು ಮನೆಗಳು ಪಾಳು ಬಿದ್ದಿವೆ. ಇದನ್ನು ಈ ಭಾಗದ ವಸತಿ ರಹಿತ ಬಡ ಜನತೆಗೆ ಹರಾಜು ಅಥವಾ ಕನಿಷ್ಠ ಬಾಡಿಗೆ ಆಧಾರದಲ್ಲಿ ನೀಡಬೇಕು ಎಂದು ಈಗಾಗಲೇ ಇಂಧನ ಸಚಿವ ಜಾರ್ಜ್​ ಅವರಿಗೆ ಮನವರಿಕೆ ಮಾಡಲಾಗಿದೆ. ಆದರೆ ಕೆಪಿಸಿಯ ಕೆಲವು ಅಧಿಕಾರಿಗಳ ಪ್ರತಿಷ್ಠೆಯಿಂದ ತೊಡಕಾಗಿದೆ ಎಂದರು.
ತಹಸೀಲ್ದಾರ್​ ರಶ್ಮಿ, ಮುಖ್ಯಾಧಿಕಾರಿ ಎಂ.ಕೆ.ಸುರೇಶ್​, ಪಪಂ ಮಾಜಿ ಸದಸ್ಯರಾದ ಸಂತೋಷ್​ಕುಮಾರ್​, ಎಂ.ರಾಜು, ಪಿ. ಮಂಜುನಾಥ್​, ಉಮೇಶ್​, ಶ್ರೀಧರ್​, ಸತೀಶ್​ ಮಹಾಲೆ, ಶ್ರೀಲತಾ, ಆಶ್ರಯ ಸಮಿತಿ ಸದಸ್ಯರಾದ ಎಚ್​.ಎಸ್​.ಸಾದಿಕ್​, ರಾಜಕುಮಾರ್​, ಸವಿತಾ, ಮಂಜುಳಾ, ಟಿ.ಸುರೇಶ್​ ಇತರರಿದ್ದರು.
ರಾಜ್ಯಕ್ಕೆ ಬೆಳಕು ನೀಡಲು ಯೋಜನಾ ಪ್ರದೇಶದ ನಿರ್ಮಾಣಕ್ಕೆ ತಮ್ಮ ಭೂಮಿ ಕಳೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಕೆಪಿಸಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯವಿದೆ. ಈ ಆದಾಯದ ಇಂತಿಷ್ಟು ಪಾಲನ್ನು ಸ್ಥಳಿಯ ಪ್ರದೇಶ ಅಭಿವೃದ್ಧಿಗೆ ಮೀಸಲಿಡಬೇಕು. ಆ ನಿಟ್ಟಿನಲ್ಲಿ ಪ್ರತಿವರ್ಷ ಸುಮಾರು 10 ಕೋಟಿ ಹಣ ಸ್ಥಳಿಯ ಅಭಿವೃದ್ಧಿಗೆ ನೀಡಬೇಕು ಎನ್ನುವುದು ಬೇಡಿಕೆ.
> ಗೋಪಾಲಕೃಷ್ಣ ಬೇಳೂರು
ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net