30ಕ್ಕೆ ಬಣಜಿಗ ಸಂಭ್ರಮ ಸಮಾವೇಶ | Pressmeet

ಕಾಂಚನಾ ಕುಮಾರ್
ಕಾಂಚನಾ ಕುಮಾರ್
Published on
ಶಿಕಾರಿಪುರ: ಪಟ್ಟಣದ ದೊಡ್ಡಪೇಟೆ ಶ್ರೀ ಮುರುಘರಾಜೇಂದ್ರ ವಿರಕ್ತ ಮಠದಲ್ಲಿ ಜೂ.30ರಂದು ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಬಣಜಿಗ ಸಂಭ್ರಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಸಮಿತಿ ಸಂಘಟನಾ ಕಾರ್ಯದರ್ಶಿ ಕಾಂಚನಾ ಕುಮಾರ್ ಹೇಳಿದರು.
ಸಮಾಜದ ಸಂಘಟನೆ ಮತ್ತು ಸಮಾಜೋತ್ಥಾನದ ದೃಷ್ಟಿಯಿಂದ ಸಮಾವೇಶ ನಡೆಸಲಾಗುತ್ತಿದೆ. 80 ವರ್ಷ ಪೂರೈಸಿದ ಸಾಮಾಜಿಕ ಕಾರ್ಯಕರ್ತರು, ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ನಿಂಬೆಗೊಂದಿ ಸಿದ್ಲಿಂಗಪ್ಪ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ್, ಬಿ.ವೈ.ರಾಘವೇಂದ್ರ, ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಲಂಬಿ, ಕಾಂಚನಾ ಕುಮಾರ್, ಜಿಲ್ಲಾ ಉಸ್ತುವಾರಿ ಲಿಂಗರಾಜ್ ಹವಳದ್, ಮಲ್ಲಿಕಾರ್ಜುನ ಸಾಹುಕಾರ್, ವೀರೇಶ್ ಹುಲಿಕೆರೆ, ಮಹಾರುದ್ರಪ್ಪ ಅಂಗಡಿ ಮತ್ತಿತರರು ಭಾಗವಹಿಸುವರು.
ಪ್ರಮುಖರಾದ ಹುಲಿಕೆರೆ ವೀರೇಶಪ್ಪ, ಹರಿಹರದ ಕುಮಾರ್, ಬಿ.ಜೆ ಮಹೇಶ್‌ಕುಮಾರ, ಹದಡಿ ಪ್ರವೀಣ್‌ಕುಮಾರ್, ವಾಗೀಶ್, ಚಂದನಾ ದಿವಾಕರ್, ಸಾಲೂರು ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net