ಕಾಗೋಡು ಸತ್ಯಾಗ್ರಹ ದಿನದ ಅಂಗವಾಗಿ ಪ್ರಶಸ್ತಿ ಪ್ರದಾನ, ಉಪನ್ಯಾಸ ಕಾರ್ಯಕ್ರಮವನ್ನು ಸಂಜೆ 6ಕ್ಕೆ ಸೇವಾ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಏರ್ಪಡಿಸಿವೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಕಾಗೋಡು ಚಳವಳಿಯ ದಿನಗಳ ಕುರಿತು ಸಮಾಜವಾದಿ ಬಿ.ಆರ್.ಜಯಂತ್ ಉಪನ್ಯಾಸ ನೀಡುವರು. ಡಿ.ಮಂಜುನಾಥ್, ಅಶ್ವಿನಿಕುಮಾರ್, ವಿ.ಟಿ.ಸ್ವಾಮಿ ಮತ್ತಿತರರು ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.