ಧಾರ್ಮಿಕ ಕಾರ್ಯಗಳಿಂದ ಜಾಗೃತಿ | religious programme

 ಸಾಗರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭೂ ಪರಿಗ್ರಹಣ ಕಾರ್ಯಕ್ರಮಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಗೋಪಾಲಕೃಷ್ಣ ಬೇಳೂರು, ಹರತಾಳು ಹಾಲಪ್ಪ, ಆರ್.ಚಂದ್ರು, ಮನೋಜ್, ಸುನೀಲ್ ಇತರರಿದ್ದರು.
ಸಾಗರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭೂ ಪರಿಗ್ರಹಣ ಕಾರ್ಯಕ್ರಮಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಗೋಪಾಲಕೃಷ್ಣ ಬೇಳೂರು, ಹರತಾಳು ಹಾಲಪ್ಪ, ಆರ್.ಚಂದ್ರು, ಮನೋಜ್, ಸುನೀಲ್ ಇತರರಿದ್ದರು.
Published on
ಸಾಗರ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಲೆನಾಡಿನ ಚಿಕ್ಕ ಶಬರಿಮಲೆ ಆಗಬೇಕು. ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಶ್ರೀಮಠದ ಸಹಕಾರ ಇರುತ್ತದೆ. ಮುಂದೊಂದು ದಿನ ಈ ಸ್ಥಳ ನಂದನವನವಾಗುತ್ತದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಾಗರದಲ್ಲಿ ಅಯ್ಯಪ್ಪ ಸ್ವಾಮಿ ನೂತನ ದೇವಸ್ಥಾನದ ಭೂ ಪರಿಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಈ ಸ್ಥಳ ಸಾಗರಕ್ಕೆ ಒಂದು ಅಲಂಕಾರವಾಗಿ ಮಾರ್ಪಡುತ್ತದೆ ಎಂದರು.
ಅಯ್ಯಪ್ಪಸ್ವಾಮಿ ಕೃಪೆಯಿಂದಾಗಿ ನಗರ ಮಧ್ಯಭಾಗದಲ್ಲಿ ಸಮಿತಿಗೆ ವಿಶಾಲ ಜಾಗ ಸಿಕ್ಕಿದೆ. ಇದರಲ್ಲಿ ದೇವಸ್ಥಾನ, ಕಲ್ಯಾಣ ಮಂಟಪ, ಶಾಲೆ ನಿರ್ಮಾಣವಾಗಬೇಕು ಎನ್ನುವ ಸಮಿತಿಯ ಆಶಯಕ್ಕೆ ಎಲ್ಲರ ಸಹಕಾರವೂ ಅಗತ್ಯ. ಸಮಿತಿಯು ಒಗ್ಗಟ್ಟಿನಿಂದ ಇಂತಹ ಸತ್ಕಾರ್ಯ ಕೈಗೊಳ್ಳಬೇಕು. ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ನಡೆಯುವ ಮೂಲಕ ಸಮೂಹವನ್ನು ಜಾಗೃತಿಗೊಳಿಸುವ ಅಗತ್ಯವಿದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಮರು ನಿರ್ಮಾಣಕ್ಕೆ ಶ್ರೀಗಳು ಚಾಲನೆ ನೀಡಿದ್ದಾರೆ. ದೇವಸ್ಥಾನದ ನೀಲಿನಕ್ಷೆ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು, ಸಂಸದರು ಸೇರಿ ಅನೇಕರು ಪಾಲ್ಗೊಂಡು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಅಯ್ಯಪ್ಪಸ್ವಾಮಿ ದೇವಸ್ಥಾನ ಮಾದರಿಯಾಗಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಮಲಯಾಳಿ ಸಮಾಜವು ಶ್ರಮಿಕ ವರ್ಗ. ಲಾಗಾಯ್ತಿನಿಂದಲೂ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ನೂತನ ದೇವಾಲಯವನ್ನು ಶಬರಿಮಲೆ ಮಾದರಿಯಲ್ಲಿ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ. ದೇವಸ್ಥಾನ ನಿರ್ಮಾಣ ಪುಣ್ಯದ ಕೆಲಸ. ದೇವರು, ಧರ್ಮದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದರು.
ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಚಂದ್ರು, ಮನೋಜ್, ಸುನೀಲ್, ರಾಜಣ್ಣ, ಶಶಿ, ಐಸಿರಿ ಸುಬ್ಬಣ್ಣ, ಪಾಂಡುರಂಗ, ಎಲ್.ಚಂದ್ರಪ್ಪ, ಮಧುಮಾಲತಿ, ಗಣಪತಿ ಮಂಡಗಳಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net