ಮಾರಿಕಾಂಬ ಪ್ರತಿಷ್ಠಾನ ಸೇರಿಕೊಳ್ಳುವ ಪ್ರಯತ್ನ

ಷಣ್ಮುಖ
ಷಣ್ಮುಖ
Published on
ಸಾಗರ: ಸಮಗಾರ ಸಮಾಜದ ಸದಸ್ಯರಲ್ಲದವರು ಮಾರಿಕಾಂಬ ನ್ಯಾಸ ಪ್ರತಿಷ್ಠಾನದಲ್ಲಿ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಮಾರಿಕಾಂಬಾ ಸಮಗಾರ ಸಮಾಜದ ಕಾರ್ಯದರ್ಶಿ ಷಣ್ಮುಖ ಹೇಳಿದರು.
ಬೇರೆ ಸಮಾಜದವರು ತಾವು ಸಮಗಾರ ಸಮಾದವರೆಂದು ಹೇಳಿಕೊಂಡು ಅವಕಾಶ ಪಡೆಯಲು ಹವಣಿಸುತ್ತಿದ್ದಾರೆ. ಮಾರಿಕಾಂಬಾ ಜಾತ್ರೆ ಸಂದರ್ಭ 8 ಪಂಗಡಗಳು ದೇವಿ ಸೇವೆ ಮಾಡಿಕೊಂಡು ಬರುತ್ತಿವೆ. ಈ ಪೈಕಿ ಸಮಗಾರ ಸಮಾಜವೂ ಒಂದು. ಜಾತ್ರೆ ಸಂದರ್ಭ ಧಾರ್ಮಿಕ ಕಾರ್ಯಕ್ರಮ ನಮ್ಮ ಸಮಾಜದಿಂದ ಆರಂಭವಾಗುತ್ತದೆ. ಪೋತರಾಜ ಚಮ್ಮಾರರ ಮನೆಗೆ ಬಂದು ಪೂಜೆ ಪಡೆಯುತ್ತಾನೆ. ಚಿಕ್ಕಮ್ಮ ಜೋಳಿಗೆ ಜೋಗಯ್ಯ, ಪೋತರಾಜನಿಗೆ ಸಮಗಾರ ಸಮಾಜದ ಮಂಜಪ್ಪ ಅವರ ಮನೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ಸಂಪ್ರದಾಯವನ್ನು ನಮ್ಮ ಸಮಾಜ ಆಚರಿಸುತ್ತಿದೆ. ಆದರೆ ಪ್ರತಿಷ್ಠಾನಕ್ಕೆ ಚುನಾವಣೆ ಇರುವುದರಿಂದ ಯರ‌್ಯಾರೋ ನಮ್ಮ ಸಮಾಜದ ಹೆಸರು ಹೇಳಿಕೊಂಡು ಸಮಿತಿಯಲ್ಲಿ ಸೇರಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ನಮ್ಮ ಸಮಾಜದಿಂದ ಎನ್.ಮೋಹನ್ ಎಂಬುವವರನ್ನು ನ್ಯಾಸ ಪ್ರತಿಷ್ಠಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಶೇಷಪ್ಪ ವಾಲೇಕರ್ ಎಂಬುವರು ಸಮಾಜದ ಸದಸ್ಯರಲ್ಲದಿದ್ದರೂ ತಾವು ಸಮಗಾರ ಸಮಾಜದವರು ಎಂದು ಪ್ರತಿಷ್ಠಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಮಾಜದಿಂದ ಅಧಿಕೃತವಾಗಿ ಬಂದ ಅರ್ಜಿ ಹೊರತುಪಡಿಸಿ ಬೇರೆಯವರನ್ನು ಪರಿಗಣಿಸಿದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಎಸ್.ಮಂಜಪ್ಪ, ಗಂಗಾಧರ, ಯೋಗೇಶ್, ಬಾಬಣ್ಣ, ಮೋಹನ್, ನಟರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net