ಮೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ

ಮೆಸ್ಕಾಂ ಸಿಬ್ಬಂದಿಯನ್ನು ಹೊಳೆಹೊನ್ನೂರು ಭಾಗದ ಸ್ಥಳಿಯ ನಿವಾಸಿಗಳು ಗೌರವಿಸಿದರು. ಸತೀಶ್​, ಸಂಜಯ್​, ಚಂದ್ರಪ್ಪ, ಪಂಪಾಪತಿ ಇತರರಿದ್ದರು.
ಮೆಸ್ಕಾಂ ಸಿಬ್ಬಂದಿಯನ್ನು ಹೊಳೆಹೊನ್ನೂರು ಭಾಗದ ಸ್ಥಳಿಯ ನಿವಾಸಿಗಳು ಗೌರವಿಸಿದರು. ಸತೀಶ್​, ಸಂಜಯ್​, ಚಂದ್ರಪ್ಪ, ಪಂಪಾಪತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಂದೆರಡು ದಿನದಲ್ಲಿ 300ಕ್ಕೂ ಹೆಚ್ಚು ಕಂಬಗಳನ್ನು ದುರಸ್ತಿ
  • ಮೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
  • ಸ್ಥಳೀಯರಿಂದ ಗೌರವ ಸಲ್ಲಿಕೆ
ಹೊಳೆಹೊನ್ನೂರು: ಒಂದೆರಡು ದಿನದಲ್ಲಿ 300ಕ್ಕೂ ಹೆಚ್ಚು ಕಂಬಗಳನ್ನು ದುರಸ್ತಿಗೊಳಿಸಿ ಹಳ್ಳಿಗಳಿಗೆ ವಿದ್ಯುತ್​ ಕಲ್ಪಿಸಿರುವ ಮೆಸ್ಕಾಂ ಸಿಬ್ಬಂದಿ ಕಾರ್ಯ ಶ್ಲಾನೀಯ ಎಂದು ಭದ್ರಾವತಿ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್​ ಹೇಳಿದರು.
ಸ್ಥಳಿಯರು ಮೆಸ್ಕಾಂ ಸಿಬ್ಬಂದಿಗೆ ಗೌರವಿಸಿ ಮಾತನಾಡಿ, ಮೂರು ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಸಿಲುಕಿ ನೂರಾರು ವಿದ್ಯುತ್​ ಕಂಬಗಳು ಭಾಗಶ@ ಹಾನಿಯಾಗಿದ್ದವು. 35 ಹಳ್ಳಿಗಳ ವಿದ್ಯುತ್​ ಸಂಪರ್ಕ ಕಡಿತವಾಗಿತ್ತು. ವಿದ್ಯುತ್​ ಇಲ್ಲದೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿತ್ತು. ಒಂದೆರಡು ದಿನಗಳಲ್ಲೇ ಹಗಲಿರುಳೂ ಕೆಲಸ ಮಾಡಿದ್ದ ಸಿಬ್ಬಂದಿ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಜಮೀನುಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸುವುದಕ್ಕೆ ಇನ್ನೊಂದು ವಾರವಾದರೂ ಸಮಯ ಬೇಕಾಗುತ್ತದೆ. ಪ್ರಸ್ತುತ ಗ್ರಾಮಗಳಿಗೆ ವಿದ್ಯುತ್​ ಸಂಪರ್ಕ ನೀಡಲಾಗಿದೆ. ತೆಂಗಿನ ಮರ ಬಿದ್ದು ತುಂಡಾದ ತಂತಿಗಳ ಜೋಡಣೆ ಸೇರಿ ರಸ್ತೆ ಬದಿ ಕಾಡು ಜಾತಿಯ ಮರಗಳ ತೆರವು ಮೆಸ್ಕಾಂಗೆ ದೊಡ್ಡ ಸವಾಲಾಗಿತ್ತು. ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸಿ ಹಳ್ಳಿಗಳಲ್ಲಿ ವಿದ್ಯುತ್​ ಕಂಬ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎಇಇ ಚಂದ್ರಪ್ಪ, ಕಿರಿಯ ಇಂಜಿನಿಯರ್​ ಪಂಪಾಪತಿ, ಸಂಜಯ್​, ಮಂಜುನಾಥ್​, ಪರಸಪ್ಪ, ರಷಿದ್​ ಅಹಮದ್​, ಶಿವರಾಜ್​, ಸದ್ದಾಂ, ಕೃಷ್ಣೋಜಿರಾವ್​, ಮಹೇಶ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net