ಒಳಮೀಸಲಾತಿ ಜಾರಿ ಬಳಿಕ ನೇಮಕಾತಿ ನಡೆಯಲಿ I reservation appointment

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರಮುಖರಾದ ರಂಗನಾಥ್, ಭಾನುಪ್ರಸಾದ್, ಹಾಲೇಶಪ್ಪ, ಎಚ್.ಎನ್.ಮಂಜುನಾಥ್, ಕೆಂಪಮ್ಮ, ಮೀನಾಕ್ಷಮ್ಮ, ಶಿವಲಿಂಗಪ್ಪ, ಮಂಜಪ್ಪ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರಮುಖರಾದ ರಂಗನಾಥ್, ಭಾನುಪ್ರಸಾದ್, ಹಾಲೇಶಪ್ಪ, ಎಚ್.ಎನ್.ಮಂಜುನಾಥ್, ಕೆಂಪಮ್ಮ, ಮೀನಾಕ್ಷಮ್ಮ, ಶಿವಲಿಂಗಪ್ಪ, ಮಂಜಪ್ಪ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳ ಆಗ್ರಹ
  • ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ: ಒಳಮೀಸಲಾತಿ ಜಾರಿಗೊಳಿಸದೆ ಹೊಸ ನೇಮಕಾತಿ (opointment) ಮಾಡಬಾರದು. ಒಳಮೀಸಲಾತಿ ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟ, ಒಳಮೀಸಲಾತಿ ಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಬುಧವಾರ (wednesday) ಡಿಸಿ ಕಚೇರಿ (office) ಎದುರು ಪ್ರತಿಭಟನೆ ನಡೆಸಿದರು.
ಒಳಮೀಸಲಾತಿ ಜಾರಿಗೊಳಿಸುವ ಮುನ್ನವೇ ಸರ್ಕಾರ 56,432 ಹುದ್ದೆಗಳ ನೇಮಕಾತಿಗೆ ಫೆ.27ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಒಳಮೀಸಲಾತಿ ಜಾರಿಗೊಳಿಸಿ ಶೇ.15ರಷ್ಟು ಮೀಸಲಾತಿ ಕಲ್ಪಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನ ಕೈಬಿಡಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮಿಸಲಾತಿ ನೀಡಬೇಕು. ಪರಿಶಿಷ್ಟ ಜಾತಿಗೆ 17, ಪರಿಶಿಷ್ಟ ವರ್ಗಕ್ಕೆ 7, ಒಟ್ಟು ಶೇ.56ರ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು. ಪರಿಶಿಷ್ಟರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ, ಆದಿಜಾಂಬವ, ಮಾದಾರ ಮಹಾಸಭಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಘಟಕದ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಭಾನುಪ್ರಸಾದ್, ಎಚ್.ಎನ್.ಮಂಜುನಾಥ್, ಅನೂಪ್, ರಂಗನಾಥ್, ಚಿನ್ನಯ್ಯ, ಹಾಲೇಶಪ್ಪ, ಅಣ್ಣಪ್ಪ, ಶಿವಲಿಂಗಪ್ಪ, ಮಂಜಪ್ಪ, ಎಸ್.ನಾಗರಾಜ್, ಮಧು, ಶ್ರೀಧರ್, ಮೂರ್ತಿ, ಶಿವಪ್ಪ, ಕೆಂಪಮ್ಮ, ಹನುಮಂತಪ್ಪ, ನಾಗಪ್ಪ, ಮೀನಾಕ್ಷಮ್ಮ, ಮಾಲಾ, ಮಹಾಲಕ್ಷ್ಮೀ ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net