ಬ್ಯಾರಲ್‌ಗಳಿಗೆ ರೇಡಿಯಂ ಸ್ಟಿಕರ್ ಅಳವಡಿಕೆ

ಆನಂದಪುರ ಸಮೀಪ ಐಗಿನಬೈಲು ಬಳಿ ಪೊಲೀಸರು ಬ್ಯಾರಲ್ಗಳಿಗೆ ರೇಡಿಯಂ ಸ್ಟಿಕರ್ ಅಂಟಿಸಿದರು. ಪ್ರವೀಣ್, ಕಾರ್ಮಿಕರು ಇದ್ದರು.
ಆನಂದಪುರ ಸಮೀಪ ಐಗಿನಬೈಲು ಬಳಿ ಪೊಲೀಸರು ಬ್ಯಾರಲ್ಗಳಿಗೆ ರೇಡಿಯಂ ಸ್ಟಿಕರ್ ಅಂಟಿಸಿದರು. ಪ್ರವೀಣ್, ಕಾರ್ಮಿಕರು ಇದ್ದರು.
Published on
ಆನಂದಪುರ: ಸಮೀಪದ ಐಗಿನಬೈಲಿನ ರಾಷ್ಟ್ರೀಯ ಹೆದ್ದಾರಿಯ ಅಪಘಾತ ವಲಯದಲ್ಲಿ ಪಿಎಸ್‌ಐ ಪ್ರವೀಣ್ ನೇತೃತ್ವದಲ್ಲಿ ರೇಡಿಯಂ ಸ್ಟಿಕರ್ ಅಂಟಿಸಿದ ಬ್ಯಾರಲ್‌ಗಳನ್ನು ಇಡಲಾಯಿತು.
ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ವಾಹನ ಸವಾರರ ಸುರಕ್ಷೆ ದೃಷ್ಟಿಯಿಂದ ಐಗಿನಬೈಲು ಕ್ರಾಸ್ ಹಾಗೂ ವೆಟ್ ಅರಣ್ಯ ನರ್ಸರಿ ಕ್ರಾಸ್ ಬಳಿ ಬ್ಯಾರಲ್‌ಗಳನ್ನು ಇಡಲಾಯಿತು. ರಾತ್ರಿ ವೇಳೆ ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತೆ ರೇಡಿಯಂ ಸ್ಟಿಕರ್‌ಗಳನ್ನು ಅಂಟಿಸಲಾಯಿತು.
ಎರಡು ಸ್ಥಳಗಳು ಅಪಘಾತ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲು ಹಾಗೂ ರಸ್ತೆ ವಿಭಜನೆ ಸ್ಪಷ್ಟವಾಗಿ ಕಾಣುವಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಅತಿವೇಗ ಮತ್ತು ನಿರ್ಲಕ್ಷೃ ಚಾಲನೆಯನ್ನು ಸಂಪೂರ್ಣವಾಗಿ ತೊರೆದು ಸುರಕ್ಷಿತ ವಾಹನ ಚಲಾಯಿಸಬೇಕು ಎಂದು  ಪಿಎಸ್‌ಐ ಪ್ರವೀಣ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net