11 ಲಕ್ಷಕ್ಕೂ ಅಧಿಕ ಅಡಿಕೆ ಮರ ನಾಶ: ಏ.26ರಂದು ಹೊಳೆಹೊನ್ನೂರು, ಆನವೇರಿ, ಕಲ್ಲಿಹಾಳ್ ಹೋಬಳಿ ವ್ಯಾಪ್ತಿಯ 32 ಹಳ್ಳಿಗಳಲ್ಲಿ 589 ಮನೆಗಳು ಹಾನಿಗೀಡಾಗಿವೆ. 841,25 ಹೆಕ್ಟೆರ್‌ನಲ್ಲಿ ಬೆಳೆದಿದ್ದ 11,35,686 ಲಕ್ಷ ಅಡಿಕೆ ಮರಗಳು ನೆಲಸಮವಾಗಿವೆ. 1.15 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳ ಜಂಟಿ ಸರ್ವೇ ಕಾರ್ಯದಲ್ಲಿ ಮುರಿತಕ್ಕೊಳಗಾದ ಅಡಿಕೆ ಮರಗಳನ್ನು ಹೊರತುಪಡಿಸಿ ತೆಂಗು, ಮಾವು, ಸಾಗುವಾನಿ ಮರಗಳ ಲೆಕ್ಕವನ್ನೇ ತೆಗೆದುಕೊಂಡಿಲ್ಲ. ಆದರೂ ವರದಿಯಲ್ಲಿ 6,200 ತೆಂಗಿನ ಮರ, 6,235 ಬಾಳೆ ಗಿಡ, 34 ಮಾವಿನ ಮರಗಳು ಹಾನಿಗೀಡಾಗಿವೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ.