ಮಕ್ಕಳಿಗೆ ಅಂಗನವಾಡಿ ಶಿಕ್ಷಣ ಅಡಿಪಾಯ | education

ಹುಣಸೇಕೊಪ್ಪದ ಅಂಗನವಾಡಿ ಕಟ್ಟಡವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಹಿತ್ಲ ಪರಮೇಶ್ವರಪ್ಪ, ಈರಪ್ಪ, ಗಜೇಂದ್ರ, ಚನ್ನಪ್ಪ ವೀರಭದ್ರಪ್ಪ ಇತರರಿದ್ದರು.
ಹುಣಸೇಕೊಪ್ಪದ ಅಂಗನವಾಡಿ ಕಟ್ಟಡವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಹಿತ್ಲ ಪರಮೇಶ್ವರಪ್ಪ, ಈರಪ್ಪ, ಗಜೇಂದ್ರ, ಚನ್ನಪ್ಪ ವೀರಭದ್ರಪ್ಪ ಇತರರಿದ್ದರು.
Published on
ಶಿಕಾರಿಪುರ: ಅಂಗನವಾಡಿ ಕೇಂದ್ರಗಳು ಶಿಕ್ಷಣದ ಅಡಿಪಾಯ. ಇಲ್ಲಿ ಮಕ್ಕಳು ಆಟೋಟದ ಜತೆಗೆ ಅಕ್ಷರಗಳನ್ನು ಬೇಗ ಕಲಿಯುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಹುಣಸೇಕೊಪ್ಪ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಹಳ್ಳಿಯಲ್ಲೂ ಅಂಗನವಾಡಿ ಕೇಂದ್ರಗಳಿವೆ. ಇವುಗಳಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲ ಸಮುದಾಯದ ಮಕ್ಕಳಿಗೆ ಅನುಕೂಲವಾಗಿದೆ. ಇಲ್ಲಿ ಮನೆಯ ವಾತಾವರಣ ಇರುವುದರಿಂದ ಮಕ್ಕಳು ಅಕ್ಷರಗಳನ್ನು ಕಲಿಯುತ್ತಾರೆ ಎಂದರು.
ತಾಲೂಕಿನಲ್ಲಿ 313 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ ಈ ಗ್ರಾಮದ ನೂತನ ಕಟ್ಟಡ ಸೇರಿದರೆ 285 ಕೇಂದ್ರಗಳಿಗೆ ಸ್ವಂತ ಕಟ್ಟಡದ ಸೌಲಭ್ಯವಿದೆ. ಉಳಿದವುಗಳಿಗೂ ಕೂಡ ಕಟ್ಟಡಗಳಾಗಬೇಕು. ಚಿಕ್ಕ ಮಕ್ಕಳು ಬರುವ ಕಾರಣ ಶಿಥಿಲವಾದ ಕಟ್ಟಡಗಳಿದ್ದರೆ ತೊಂದರೆ ಯಾಗುತ್ತದೆ. ಹುಣಸೇಕೊಪ್ಪದ ಈ ಕಟ್ಟಡ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಅನುಪಮ. ಕರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರ ಜತೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದ ಗಣತಿ ಮುಂತಾದ ಯೋಜನೆಗಳ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವದು ಶ್ಲಾಘನೀಯ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಿತ್ಲ ಪರಮೇಶ್ವರಪ್ಪ, ಈರಪ್ಪ, ಗಜೇಂದ್ರ, ಚನ್ನಪ್ಪ ವೀರಭದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net