ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದಲ್ಲಿ 1500ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕಣ್ಕಿ, ಬೇಳೂರು, ವಡ್ಡಿನಬೈಲು, ಮಕ್ಕಿಮನೆ, ಕೌರಿ, ಬೈಸೆ, ಬಜೇಕುಂಬ್ರಿ, ಮೇಲಿನಕೊಪ್ಪ, ಮಠದಹಳ್ಳಿ, ಬಾಳೆಗದ್ದೆ, ಕೆಳಗಿನಕೊಪ್ಪ, ಹೆನ್ನೇಬೆಲು, ಚಿಮಡಿಗದ್ದೆ, ಕುಂಟೆ ಕುಂಬ್ರಿ ಸೇರಿ ಹತ್ತಾರು ಮಜರೆ ಹಳ್ಳಿಗಳನ್ನು ಈ ಗ್ರಾಮ ಒಳಗೊಂಡಿದೆ. ಹೊಸನಗರದಿಂದ ಹಿಲ್ಕುಂಜಿ ಮಾರ್ಗವಾಗಿ ಬೇಳೂರಿಗೆ 17 ಕಿ.ಮೀ ದೂರ. ಪ್ರತಿಯೊಂದಕ್ಕೂ ನಗರ, ತಾಲೂಕು ಕೇಂದ್ರಕ್ಕೆ ಹೋಗಬೇಕು. ಆದರೆ ಬಸ್ ಸಂಪರ್ಕ ವ್ಯವಸ್ಥೆಯೇ ಇಲ್ಲ. ಇರುವುದೊಂದೇ ಸರ್ಕಾರಿ ಬಸ್. ಅದು 27 ಕಿ.ಮೀ ದೂರದ ತೀರ್ಥಹಳ್ಳಿಗೆ. ಬೆಳಗ್ಗೆ ಹೋದರೆ ಸಂಜೆ ವಾಪಸಾಗುತ್ತದೆ. ಪ್ರತಿಯೊಂದಕ್ಕೂ ಬೇಳೂರು ಗ್ರಾಮದಿಂದ ಹಿಲ್ಕುಂಜಿವರೆಗೆ 5 ಕಿ.ಮೀ ನಡೆದು ಹೋಗುವ ಅನಿವಾರ್ಯತೆ ಇದೆ.