ಶಿಕಾರಿಪುರ: ಅಂಬ್ಲಿಗೊಳ ಜಲಾಶಯ ಗುರುವಾರ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಶಿಕಾರಿಪುರ & ಆನಂದಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಈ ಜಲಾಶಯ ಆಕರ್ಷಕವಾಗಿದೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಭಾಗದ ಕಷಿ ಚಟುವಟಿಕೆಗಳಿಗೆ ಪ್ರಮುಖ ನೀರಾವರಿ ಮೂಲವಾಗಿರುವ ಈ ಜಲಾಶಯ 8000 ಎಕರೆ ಪ್ರದೇಶದ ರೈತರಿಗೆ ಜೀವನಾಡಿಯಾಗಿದೆ. 1954 ರಿಂದ 1964ರ ಅವಧಿಯಲ್ಲಿ ಸುಮಾರು 1.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ.