ಅಂಬಿಗರ ಚೌಡಯ್ಯ ಮಹಾನ್ ಜ್ಞಾನಿ | Choudaiah Birthday

ಶಿಖಾರಿಪುರದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಧರ್ಮಪ್ಪ, ಮಂಜುಳಾ ಭಜಂತ್ರಿ, ಡಿ.ಎಲ್.ಬಸವರಾಜ್, ವೀಣಾ, ಪುಷ್ಪಾ ಮಂಜಪ್ಪ ಇತರರಿದ್ದರು.
ಶಿಖಾರಿಪುರದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಧರ್ಮಪ್ಪ, ಮಂಜುಳಾ ಭಜಂತ್ರಿ, ಡಿ.ಎಲ್.ಬಸವರಾಜ್, ವೀಣಾ, ಪುಷ್ಪಾ ಮಂಜಪ್ಪ ಇತರರಿದ್ದರು.
Published on
ಶಿಕಾರಿಪುರ: ವಚನ ಚಳವಳಿಯಲ್ಲಿ ತಮ್ಮ ನೇರ ನುಡಿ ಮತ್ತು ದಿಟ್ಟತನದ ಮೂಲಕ ವಿಶಿಷ್ಟ ಸ್ಥಾನ ಪಡೆದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಭ್ರಾಂತೇಶ ಭವನದಲ್ಲಿ ತಾಲೂಕು ಆಡಳಿತ ಮತ್ತು ಗಂಗಾಮತ ಸಮಾಜದಿಂದ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ಚೌಡಯ್ಯ ಭವಸಾಗರವನ್ನು ದಾಟಿಸುವ ಜ್ಞಾನಿಯಾಗಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಶರಣನ ಬದುಕು ನಮ್ಮ ಮುಂದಿನ ಪೀಳಿಗೆಗೆ  ಕೊಡುಗೆಯಾಗಬೇಕು ಎಂದರು.
ಚೌಡಯ್ಯ ವೃತ್ತಿಯಿಂದ ಅಂಬಿಗರಾಗಿದ್ದರು. ಜನರನ್ನು ತುಂಗಭದ್ರಾ ನದಿ ನದಿ ದಾಟಿಸುವ ಕಾಯಕ ಮಾಡುತ್ತಲೇ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನೂ ಮಾಡಿದರು.ಅಂಬಿಗರ ಚೌಡಯ್ಯ ಅವರ ವಚನಗಳು ಅತ್ಯಂತ ತೀಕ್ಷ್ಣಮತ್ತು ನೇರ. ಅಂದಿನ ಕಾಲದ ಮೌಢ್ಯ, ಕಪಟ ಭಕ್ತಿ ಮತ್ತು ಸಾಮಾಜಿಕ ಅಸಮಾನತೆಯನ್ನು ಕಟುವಾಗಿ ಟೀಕಿಸಿದ್ದರು ಎಂದರು.
ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಧರ್ಮಣ್ಣ ಮಾತನಾಡಿ, ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಸಮಾಜದ ಹಿರಿಯರ, ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆದು ತಾಲೂಕಿನಲ್ಲಿ ಇನ್ನಷ್ಟು ಸದೃಢಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, ಚೌಡಯ್ಯ ಅವರು ಬಾಹ್ಯ ಆಚರಣೆಗಿಂತ ಮನಸ್ಸಿನ ಶುದ್ಧಿ ಮುಖ್ಯ ಎಂದು ಸಾರಿದರು. ಇಂದಿಗೂ ಅವರ ವಿಚಾರಗಳು ಪ್ರಸ್ತುತವಾಗಿವೆ. ಶ್ರಮಜೀವಿಗಳು, ಶೋಷಿತರ ಪರವಾಗಿ ಅವರು ಎತ್ತಿದ ಧ್ವನಿ ಇಂದಿಗೂ ನಮಗೆ ಪ್ರೇರಕಶಕ್ತಿ ಎಂದು ಹೇಳಿದರು.
ತಹಸೀಲ್ದಾರ್ ಮಂಜುಳಾ ಭಜಂತ್ರಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಆರಾಧನಾ ಸಮಿತಿ ಸದಸ್ಯೆ ವೀಣಾ, ಬಸವರಾಜ್, ಕೆಡಿಪಿ ಸದಸ್ಯೆ ಪುಷ್ಪಾ ಮಂಜಪ್ಪ, ಕೆ.ಜಿ.ವಸಂತ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net