ಹೊಳೆಹೊನ್ನೂರಿನ ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಸ್.ರಂಗನಾಥಯ್ಯ, ದ್ಯಾಮಪ್ಪ, ಡಾ. ಯು.ವಿಜಯ ಶೆಟ್ಟಿ ಇತರರಿದ್ದರು.
ಹೊಳೆಹೊನ್ನೂರು: ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ತೊಡಗಿಸಿಕೊಳ್ಳಲು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿವೇಕಾನಂದ ಲಯನ್ಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ರಂಗನಾಥಯ್ಯ ಹೇಳಿದರು.
ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್ ಅಡಿ ನಡೆಯುತ್ತಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಾಷಿಕೋತ್ಸವ ಅಂಗವಾಗಿ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸರಳ ನಿಯಮಗಳನ್ನು ಪಾಲಿಸಬೇಕು. ಬೆಳಗ್ಗೆ ಬೇಗ ಏಳುವುದು. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು. ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯ, ಹಾಲಿನ ಉತ್ಪನ್ನ ಒಳಗೊಂಡಿರಬೇಕು. ಪ್ರತಿ ದಿನ ನಿಯಮಿತ ವ್ಯಾಯಾಮ ಮಾಡುವುದು. ಉತ್ತಮ ಚಟುವಟಿಕೆಗಳ ಅಳವಡಿಕೆಯಿಂದ ಬದುಕು ಸುಂದರವಾಗುತ್ತದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ದ್ಯಾಮಪ್ಪ, ಖಜಾಂಚಿ ಡಾ. ಯು.ವಿಜಯ ಶೆಟ್ಟಿ, ಇ.ರೇಣುಕಾ, ಡಾ. ಎನ್.ಎಸ್.ಸೋಮಶೇಖರಪ್ಪ, ಆರ್.ಆಶಾ, ದಾನೇಶಯ್ಯ, ದೀಪಾ ಚಂದ್ರು, ಮುಖ್ಯಶಿಕ್ಷಕ ಎಚ್.ಸುರೇಶ್, ಎಸ್.ಕಲ್ಯಾಣಪ್ಪ, ರಾಬಿಯಾ ಬೀ ಇತರರಿದ್ದರು.