ಭಾನುವಾರದಿಂದ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು ಮುಖ್ಯ ಬಸ್ ನಿಲ್ದಾಣ ಮಾರ್ಗದ ರಸ್ತೆ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಿ ದ್ವಿಚಕ್ರ ವಾಹನಗಳನ್ನು ಅಂಗಡಿ ಎದುರು ನಿಲ್ಲಿಸದಂತೆ ತಡೆ ಹಿಡಿದಿದ್ದಾರೆ. ಇದರಿಂದ ಧೂಮ ಸೇವನೆ ಮಾಡಲು, ಟೀ, ಕಾಫಿ ಕುಡಿಯಲು ಹೋಗುವ ದ್ವಿಚಕ್ರ ವಾಹನ ಸವಾರರು ಭಾನುವಾರ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಜಾಗವಿಲ್ಲದೆ ಪರದಾಡಿದರು. ವ್ಯಾಪಾರವಿಲ್ಲದೆ ಅಂಗಡಿ ಮಾಲೀಕರು ಪೊಲೀಸರಿಗೆ ಶಾಪ ಹಾಕಿದರು.