ಏಕಾಗ್ರತೆ ಇದ್ದರೆ ಸಾಧನೆ ಸುಲಭ

ಸಾಗರ ತಾಲೂಕು ಹೆಗ್ಗೋಡಿನ ಕಾಕಲ್​ ಪದವಿ ಕಾಲೇಜು ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮವನ್ನು ತಹಸೀಲ್ದಾರ್​ ಡಾ. ಪ್ರತಿಭಾ ಉದ್ಘಾಟಿಸಿದರು. ಸಿದ್ಧಾರ್ಥ ಭಟ್​, ನಾಗರಾಜ್​, ಸತ್ಯನಾರಾಯಣ ಭಾಗಿ, ಜಿ.ಜಿ.ವಸುಂಧರಾ ಇದ್ದರು.
ಸಾಗರ ತಾಲೂಕು ಹೆಗ್ಗೋಡಿನ ಕಾಕಲ್​ ಪದವಿ ಕಾಲೇಜು ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮವನ್ನು ತಹಸೀಲ್ದಾರ್​ ಡಾ. ಪ್ರತಿಭಾ ಉದ್ಘಾಟಿಸಿದರು. ಸಿದ್ಧಾರ್ಥ ಭಟ್​, ನಾಗರಾಜ್​, ಸತ್ಯನಾರಾಯಣ ಭಾಗಿ, ಜಿ.ಜಿ.ವಸುಂಧರಾ ಇದ್ದರು.
Published on
ತ್ಯಾಗರ್ತಿ: ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟರೆ ಭವಿಷ್ಯದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಸಾಗರ ತಹಸೀಲ್ದಾರ್​ ಡಾ. ಪ್ರತಿಭಾ ಹೇಳಿದರು.
ಸಾಗರ ತಾಲೂಕು ಹೆಗ್ಗೋಡಿನ ಕಾಕಲ್​ ಪದವಿ ಕಾಲೇಜು ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರಿಶ್ರಮದಿಂದ, ಏಕಾಗ್ರತೆಯಿಂದ ಗುರಿ ತಲುಪಿದಾಗ ಓದಿದ ಸಂಸ್ಥೆಗೂ ಹಾಗೂ ತಂದೆ ತಾಯಿಗಳಿಗೂ ಸಂತೋಷ ಆಗುತ್ತದೆ. ಸಮಾಜದಲ್ಲೂ ಗೌರವ ಸಿಗುತ್ತದೆ. ವಿದ್ಯಾರ್ಥಿ ಜೀವನ ಕಠಿಣ ಅನಿಸಿದರೂ ಸಾಧನೆ ಮಾಡಿದಾಗ ಸಂತೋಷವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಹಳೇ ವಿದ್ಯಾರ್ಥಿ ಸಿದ್ಧಾರ್ಥ ಭಟ್​ ಮಾತನಾಡಿ, ವಿದ್ಯಾರ್ಥಿ ವೇದಿಕೆ ಅನ್ನೋದು ಕಾಟಾಚಾರಕ್ಕಲ್ಲ. ಈ ವೇದಿಕೆ ಸಂಪರ್ಕ ಸಾಧನೆಯ ಹಾದಿ. ಗ್ರಾಮೀಣ ಪ್ರದೇಶದ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ ಎಂದು ಕೊರಗ ಬೇಡಿ. ಸಾಧನೆಗೆ ಅವಶ್ಯವಾದ ಏಕಾಗ್ರತೆ ಈ ಕಾಲೇಜಿನಲ್ಲಿ ಸಿಗುತ್ತದೆ ಎಂದರು.
ಕೇಡಲಸರ ವಿದ್ಯಾಭಿವೃದ್ಧಿ ಸಂದ ಅಧ್ಯ ನಾಗರಾಜ್​, ಕಾಕಲ್​ ಪದವಿ ಕಾಲೇಜು ಉಪ ಸಮಿತಿ ಅಧ್ಯ ಸತ್ಯನಾರಾಯಣ ಭಾಗಿ, ಪ್ರಾಚಾರ್ಯ ಜಿ.ಜಿ.ವಸುಂಧರಾ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net