ಅಯಾನ್ ಗ್ರೂಪ್‌ನ ಮಾಲೀಕ, ಉಡುಪಿಯ ಅಬ್ದುಲ್ ರಜಾಕ್ (47) ಬಂಧಿತ ಆರೋಪಿ. ಈತನ ವಿರುದ್ಧ ಹೊಸನಗರದ ನಿಖಿಲ್ ಎಂಬುವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವರು ಅಯಾನ್ ಗ್ರೂಪ್‌ನ ಪಾಲುದಾರರಾಗಿದ್ದು, ಸ್ನೇಹಿತ ನಿಖಿಲ್‌ಗೆ ಸ್ಕೀಮ್‌ಗಳ ಆಸೆ ತೋರಿಸಿದ್ದರು. 13, 16 ಮತ್ತು 21 ತಿಂಗಳ ಸ್ಕೀಮ್‌ಗಳಿದ್ದು, ಪ್ರತಿ ತಿಂಗಳು ಸಾವಿರ ರೂ.ನಂತೆ ಸಾರ್ವಜನಿಕರಿಂದ ವಂತಿಗೆ ಪಡೆದು ಸ್ಕೀಮ್‌ನ ಮಧ್ಯದಲ್ಲಿ ಆಕರ್ಷಕ ಬಹುಮಾನ(Attractive prize) ಹಾಗೂ ಸ್ಕೀಮ್ ಮುಗಿದ ಬಳಿಕ ಸಮಾಧಾನಕರ ಬಹುಮಾನ ನೀಡುವುದಾಗಿ ನಂಬಿಸಿದ್ದರು. ಅಲ್ಲದೆ, ಪ್ರತಿ ಕಾರ್ಡ್‌ಗೆ 300 ರೂ. ಕಮೀಷನ್ ನೀಡುವುದಾಗಿ ಹೇಳಿದ್ದರು.