ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ | Felicitation

ಸಾಗರದಲ್ಲಿ ಲಯನ್ಸ್ ಶ್ರೀಗಂಧ, ಮದರ್ ತೆರೇಸಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಸ್ವಯಂ ಉದ್ಯೋಗಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ನಾಗರಾಜ್, ಮರಿಯಾ ಲೀಬಾ, ವಾಣಿ, ಪವಿತ್ರಾ ಇತರರಿದ್ದರು.
ಸಾಗರದಲ್ಲಿ ಲಯನ್ಸ್ ಶ್ರೀಗಂಧ, ಮದರ್ ತೆರೇಸಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಸ್ವಯಂ ಉದ್ಯೋಗಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ನಾಗರಾಜ್, ಮರಿಯಾ ಲೀಬಾ, ವಾಣಿ, ಪವಿತ್ರಾ ಇತರರಿದ್ದರು.
Published on
ಸಾಗರ: ಬದುಕಿನಲ್ಲಿ ಹಲವು ಸಂಕಷ್ಟಗಳು ಎದುರಾಗುತ್ತದೆ. ಯಾವುದಕ್ಕೂ ಕುಗ್ಗದೆ ಆತ್ಮವಿಶ್ವಾಸದಿಂದ ಬದುಕು ಎದುರಿಸಬೇಕು ಎಂದು ಲಯನ್ಸ್ ಶ್ರೀಗಂಧ ಸಾಗರ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಹೇಳಿದರು.
ಸಾಗರದ ಪ್ರವಾಸಿ ಮಂದಿರದಲ್ಲಿ ಲಯನ್ಸ್ ಶ್ರೀಗಂಧ ಮತ್ತು ಮದರ್ ತೆರೇಸಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಸಾಧಕ ಮಹಿಳೆ ಸವಿತಾ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ದೈಹಿಕ ನ್ಯೂನ್ಯತೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ ಬದುಕು ಕಟ್ಟಿಕೊಂಡ ಸವಿತಾ ಅವರು ನಮಗೆ ಆದರ್ಶವಾಗಬೇಕು ಎಂದರು.
ಸವಿತಾ ಅವರು ಅಪಘಾತದಿಂದ ಅಂಗವೈಕಲ್ಯ ಸಮಸ್ಯೆಗೆ ತುತ್ತಾದವರು. ಸೊಂಟದ ಕೆಳಗಿನ ಸ್ಪರ್ಶ ಕಳೆದುಕೊಂಡರೂ ಧೃತಿಗೆಡದೆ ಸ್ವಯಂ ಉದ್ಯೋಗದ ಮೂಲಕ ಯಶಸ್ವಿಯಾಗಿದ್ದಾರೆ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ಮರಿಯಾ ಲೀಮಾ ಮಾತನಾಡಿ, ಸವಿತಾ ಅವರಿಗೆ ಅಪಘಾತವಾದ ನಂತರ ಕುಟುಂಬ ಅವರನ್ನು ತಿರಸ್ಕಾರ ಮಾಡಿತು. ಆದರೆ ಮಣ್ಣಿನಲ್ಲಿ ಅಲಂಕಾರಿಕಾ ಆಭರಣ ತಯಾರಿಸಿ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ತಮ್ಮದೆ ಆನ್‌ಲೈನ್ ಯೂಟ್ಯೂಬ್ ಚಾನಲ್ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸವಿತಾ, ಒಂಟಿ ಜೀವನ, ಮಗನ ಜವಾಬ್ದಾರಿ ನಿರ್ವಹಿಸಲು ಆರಂಭದಲ್ಲಿ ಸವಾಲು ಎನಿಸಿತ್ತು. ಅಪಘಾತದಲ್ಲಿ ದೈಹಿಕ ನ್ಯೂನ್ಯತೆ ಉಂಟಾದಾಗ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮನಸ್ಸು ಹೇಳಿತ್ತು. ಆದರೆ ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಬದುಕು ರೂಪಿಸಿಕೊಂಡು ಯಶಸ್ವಿಯಾಗಿದ್ದೇನೆ. ಮಹಿಳೆಯರು ಸಮಾಜಕ್ಕೆ ಆದರ್ಶರಾಗಬೇಕು ಎಂದು ಹೇಳಿದರು.
ವಾಣಿ, ಪವಿತ್ರಾ, ಸವಿತಾ ಮಹಾಬಲೇಶ್, ಸಹನಾ ವಿನಯ್, ರಾಮಪ್ಪ ಶಿರವಾಳ, ಶೀತಲ್, ಮೇಜರ್ ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net