ನಿವೃತ್ತ ಯೋಧನಿಗೆ ಅಭಿಮಾನದ ಸ್ವಾಗತ

ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಯೋಧ ಕೆ.ವಿ.ಕೃಷ್ಣಮೂರ್ತಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಾರ್ವಜನಿಕರು, ನಿವೃತ್ತ ಯೋಧರು ಹಾಜರಿದ್ದರು.
ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಯೋಧ ಕೆ.ವಿ.ಕೃಷ್ಣಮೂರ್ತಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಸಾರ್ವಜನಿಕರು, ನಿವೃತ್ತ ಯೋಧರು ಹಾಜರಿದ್ದರು.
Published on
ರಿಪ್ಪನ್‌ಪೇಟೆ: ಭಾರತೀಯ ಅರೆಸೇನಾ ಪಡೆಯಲ್ಲಿ 40 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಯೋಧ ಕೆ.ವಿ.ಕೃಷ್ಣಮೂರ್ತಿ ಅವರನ್ನು ಸಾರ್ವಜನಿಕರು ಅಭಿಮಾನದಿಂದ ಸ್ವಾಗತಿಸಿದರು.
ಪಟ್ಟಣದ ಶಿವಮಂದಿರದಿಂದ ಡೊಳ್ಳು ಕುಣಿತದೊಂದಿಗೆ ತೆರೆದ ವಾಹನದ ಮೆರವಣಿಗೆಯಲ್ಲಿ ಮಾಜಿ ಯೋಧರು, ಗ್ರಾಮಸ್ಥರು ಪಾಲ್ಗೊಂಡು ರಾಷ್ಟ್ರಧ್ವಜದೊಂದಿಗೆ ದೇಶಪರ ಘೋಷಣೆ ಕೂಗಿದರು. ವಿನಾಯಕ ವೃತ್ತದಲ್ಲಿ ಸಮಾವೇಶಗೊಂಡು ವಿವಿಧ ಸಂಘ ಸಂಸ್ಥೆ, ಹಿತೈಷಿಗಳು, ಸಾರ್ವಜನಿಕರು ಯೋಧನನ್ನು ಸನ್ಮಾನಿಸಿ ಶುಭ ಹಾರೈಸಿದರು.
ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಕೆಂಪನಾಯ್ಕ, ಚನ್ನಮ್ಮ ದಂಪತಿ ಪುತ್ರ ಕೆ.ವಿ.ಕೃಷ್ಣಮೂರ್ತಿ ಅರೆಸೇನಾ ಪಡೆಗೆ ಆಯ್ಕೆಯಾಗಿ ಗುವಾಹಟಿ, ಮಣಿಪುರ, ನಾಗಾಲ್ಯಾಂಡ್, ಆಂಧ್ರಪ್ರದೇಶ, ಚೆನ್ನೈಗಳಲ್ಲಿ ಕಾರ್ಯನಿರ್ವಹಿಸಿ ವಿವಿಐಪಿ ಭದ್ರತೆ ಬ್ಲಾೃಕ್ ಕ್ಯಾಟ್ ಕಮಾಂಡೋದಲ್ಲಿ ಕೆಲಸ ನಿರ್ವಹಿಸಿ ಸಬ್‌ಇನ್ಸ್‌ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿ ನಿವೃತ್ತರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net