ಸಂಕಷ್ಟ ನಿವಾರಣೆಗೆ ಪ್ರಬಲ ಹೋರಾಟ ಅವಶ್ಯ

ರಿಪ್ಪನ್​ಪೇಟೆ ಗ್ರಾಪಂನಲ್ಲಿ ಆಯೋಜಿಸಿದ್ದ ಕಸ್ತೂರಿ ರಂಗನ್​ ವರದಿ ವಿರೋಧಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶಿಮುಲ್​ ಅಧ್ಯ  ವಿದ್ಯಾಧರ ಮಾತನಾಡಿದರು. ಈಶ್ವರಪ್ಪ ಗೌಡ, ಕೀರ್ತಿಗೌಡ, ಯೋಗೇಶ್​, ಶ್ರೀಧರ ಇತರರಿದ್ದರು.
ರಿಪ್ಪನ್​ಪೇಟೆ ಗ್ರಾಪಂನಲ್ಲಿ ಆಯೋಜಿಸಿದ್ದ ಕಸ್ತೂರಿ ರಂಗನ್​ ವರದಿ ವಿರೋಧಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶಿಮುಲ್​ ಅಧ್ಯ ವಿದ್ಯಾಧರ ಮಾತನಾಡಿದರು. ಈಶ್ವರಪ್ಪ ಗೌಡ, ಕೀರ್ತಿಗೌಡ, ಯೋಗೇಶ್​, ಶ್ರೀಧರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಸ್ತೂರಿ ರಂಗನ್​ ವರದಿ ವಿರೋಧಿಸಿ ಪಾದಯಾತ್ರೆ
  • ವಾಟಗೋಡು ಸುರೇಶ್​ ಮಾಹಿತಿ
  • ಸಂಕಷ್ಟ ನಿವಾರಣೆಗೆ ಪ್ರಬಲ ಹೋರಾಟ ಅವಶ್ಯ
ರಿಪ್ಪನ್​ಪೇಟೆ: ಅನೇಕ ಜಲಾಶಯಗಳ ಮುಳುಗಡೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹೊಸನಗರ ಜನತೆಯಿಂದ ಪ್ರಬಲ ಹೋರಾಟ ಆಗದಿದ್ದರೆ ಬದುಕು ದುಸ್ತರವಾಗಲಿದೆ ಎಂದು ಪಶ್ಚಿಮಟ್ಟ ರೈತ ಸಹಕಾರಿ ವೇದಿಕೆ ತಾಲೂಕು ಅಧ್ಯ ವಾಟಗೋಡು ಸುರೇಶ್​ ಹೇಳಿದರು.
ಕಸ್ತೂರಿ ರಂಗನ್​ ವರದಿ ಜಾರಿ ವಿರೋಧಿಸಿ ಆ.29ರಂದು ಹೊಸನಗರದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಬಹಿರಂಗ ಸಭೆ ಅಂಗವಾಗಿ ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವರದಿಯ ಕರಡು ಪ್ರಸ್ತುತ  7ನೇ ಬಾರಿಗೆ ಪ್ರಕಟವಾಗುತ್ತಿದೆ. ಈ ಹಿಂದಿನ ಅನೇಕ ಹೋರಾಟಗಳು ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ಈಗಿನ ನಮ್ಮ ದೃಢವಾದ ಹೋರಾಟದಿಂದ ಸರ್ಕಾರಗಳೇ ಜನರಲ್ಲಿಗೆ ಬಂದು ವರದಿಯನ್ನು ತಿರಸ್ಕರಿಸುವಂತಾಗಬೇಕು. ಇಲ್ಲಿ ವರ್ಗ, ಗ್ರಾಮ, ಪ ಯಾವುದನ್ನೂ ತರದೆ ಹೋರಾಟ ಮಾಡಬೇಕು ಎಂದರು. 
ಶಿಮುಲ್​ ಅಧ್ಯ ವಿದ್ಯಾಧರ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆಯವರು ಮೊಬೈಲ್​ ಆ್ಯಪ್​ ಜತೆ ಬಂದು ಹೆದರಿಸುತ್ತಿದ್ದಾರೆ. ವರದಿ ಜಾರಿಯಾದರೆ ಸಂಪೂರ್ಣ ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಬೆಲೆ ತೆರಬೇಕಾಗುತ್ತದೆ ಎಂದರು.
ಬಂಡಿ ರಾಮಚಂದ್ರ ಮಾತನಾಡಿ, ಕಸ್ತೂರಿ ರಂಗನ್​ ವರದಿಯಿಂದ ಮಲೆನಾಡ ಜನರಿಗೆ ಬದುಕಿನ ಪ್ರಶ್ನೆ ಉದ್ಭವಿಸಿದೆ. ಸ್ವ ಪ್ರೇರಣೆಯಿಂದ ಮೊದಲಿಗರಾಗಿ ಪ್ರತಿ ಮನೆಗೂ ಮಾಹಿತಿ ರವಾನಿಸಿ, ಎಲ್ಲ ಗ್ರಾಮದಿಂದ, ಸಮಸ್ತ ತಾಲೂಕಿನ ಜನ ಪಾದಯಾತ್ರೆ, ಹೋರಾಟದಲ್ಲಿ ಭಾಗವಹಿಸಿ ವರದಿ ತಿರಸ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಎಂ.ಪರಮೇಶ್​ ಮಾತನಾಡಿ, ಕಸ್ತೂರಿ ರಂಗನ್​ ವರದಿಯಿಂದ ಎಲ್ಲರಿಗೂ ಸಂಚಕಾರ. ಪ ತಾರತಮ್ಯ ಬಿಟ್ಟು ಎಲ್ಲರೂ ಹೋರಾಟಕ್ಕೆ ಧುಮುಕಬೇಕು. ರೈತರಿಗೆ ಆಗುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಸಹಕಾರಿ ೇತ್ರ ಹೋರಾಟದ ನೇತೃತ್ವವಹಿಸಿದೆ. ಮಾರಿಯನ್ನು ಮನೆಗೆ ಬಿಟ್ಟುಕೊಳ್ಳುವ ಮೊದಲೇ ಓಡಿಸೋಣ. ಎಲ್ಲರೂ ಹೋರಾಟಕ್ಕಾಗಿ ಒಗ್ಗಟ್ಟಾಗಿ ಎಂದು ತಿಳಿಸಿದರು. ಈಶ್ವರಪ್ಪ ಗೌಡ, ಕೀರ್ತಿಗೌಡ, ಯೋಗೇಶ್​, ಶ್ರೀಧರ ಇತರರಿದ್ದರು.  
ಚುನಾಯಿತ ಪ್ರತಿನಿಧಿಗಳು ಪಾದಯಾತ್ರೆಗೆ ಬರುವ ಅಗತ್ಯವಿಲ್ಲ. ಶಾಸನ ಸಭೆಗಳಲ್ಲಿ ಕೆಲಸ ಮಾಡಿ ತೋರಿಸಲಿ. ಅದನ್ನು ಬಿಟ್ಟು ಉತ್ತರ ಹೇಳಬೇಕಾದವರು ಪ್ರಶ್ನೆ ಕೇಳುವುದು ಬೇಡ. ತಾಲೂಕಿನಾದ್ಯಂತ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ನ್ಯಾಯೋಚಿತ ಹೋರಾಟವನ್ನು ಯಶಸ್ವಿಗೊಳಿಸಬೇಕು.
> ವಾಟಗೋಡು ಸುರೇಶ್​
ಪಶ್ಚಿಮಟ್ಟ ರೈತ ಸಹಕಾರಿ ವೇದಿಕೆ ತಾಲೂಕು ಅಧ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net