ಪೊಲೀಸರ ಗುಂಡೇಟಿಗೆ ಗಾಯಗೊಂಡ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ರೌಡಿಶೀಟರ್ ಡಿಚ್ಚಿ ಮುಬಾರಕ್‌ನನ್ನು ಎಸ್‌ಪಿ ಬಿ.ನಿಖಿಲ್ ಪರಿಶೀಲಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೌಡಿ ಡಿಚ್ಚಿ ಮುಬಾರಕ್ ಆತನ ಸಹಚರರಿಂದ ಶಿವನಿ ಕ್ರಾಸ್,ಗೌರಾಪುರ ಭಾಗದಲ್ಲಿ ದರೋಡೆಗೆ ಹಂಚು
ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್ ರಾಠೋಡ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ವಿಶೇಷ ತಂಡ ರಚನೆ
ಘಟನೆ ಬೆನ್ನಲ್ಲೇ ಎಸ್‌ಪಿ ಬಿ.ನಿಖಿಲ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ
ಶಿವಮೊಗ್ಗ: ಭದ್ರಾವತಿ ದರೋಡೆ(Robbery)ಗೆ ಸಂಚು ರೂಪಿಸಿ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ ರೌಡಿಶೀಟರ್(Rowdysheeter) ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಶನಿವಾರ ಸಂಜೆ ರೌಡಿ ಡಿಚ್ಚಿ ಮುಬಾರಕ್ ಹಾಗೂ ಆತನ ಸಹಚರರು ಶಿವನಿ ಕ್ರಾಸ್ ಮತ್ತು ಗೌರಾಪುರ ಭಾಗದಲ್ಲಿ ದರೋಡೆಗೆ
ಹಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಎಕ್ಸ್‌ಯುವಿ(XUV) ಹಾಗೂ ಸ್ಕೂಟಿ(Scooty)ಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಓಡಾಡತ್ತಿದ್ದಾರೆಂದು ಮಧ್ಯಾಹ್ನ ಭದ್ರಾವತಿ ಡಿವೈಎಸ್‌ಪಿ(Dysp) ಪ್ರಕಾಶ್ ರಾಠೋಡ್ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿತ್ತು.
ಹೊಸಮನೆ(Hosamene)ಠಾಣೆಯ ಪಿಎಸ್‌ಐ ಎಂ.ಪಿ.ಸಿದ್ದಪ್ಪ, ಪೇಪರ್ ಟೌನ್ ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಹಾಗೂ ನ್ಯೂಟೌನ್(New town)ಪಿಎಸ್‌ಐ ರಮೇಶ್ ಅವರ ನೇತೃತ್ವದ ವಿಶೇಷ ತಂಡ ಶನಿವಾರ ಸಂಜೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು. ಈ ವೇಳೆ ತಂಡವು ಡಿಚ್ಚಿ ಮುಬಾರಕ್ ಮತ್ತು ಆತನ ಸಹಚರರನ್ನು ಸುತ್ತುವರಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಕಲ್ಲು ಮತ್ತು ಚಾಕುಗಳಿಂದ ಮನಬಂದಂತೆ ದಾಳಿ ನಡೆಸಿದ್ದಾರೆ.
ಆರೋಪಿಗಳ ದಾಳಿಯಿಂದ ಹೊಸಮನೆ ಠಾಣೆ ಪಿಎಸ್‌ಐ ಸಿದ್ದಪ್ಪ ಅವರ ಕಾಲಿನ ಮೂಳೆ(Leg bone) ಮುರಿದಿದೆ. ಚಾಕುವಿನಿಂದ ಕೈಗೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವ(Bleeding)ವಾಗಿದೆ. ಮತ್ತೊಬ್ಬ ಪಿಎಸ್‌ಐ ಕೃಷ್ಣಕುಮಾರ್ ಅವರ ಕೈ ಬೆರಳು ಮುರಿದಿದ್ದು, ಸಿಬ್ಬಂದಿ ಆದರ್ಶ ಅವರಿಗೂ ಗಾಯವಾಗಿದೆ ಎಂದು ಎಸ್‌ಪಿ ಬಿ.ನಿಖಿಲ್ ತಿಳಿಸಿದ್ದಾರೆ.
ಮುಭಾರಕ್ ಸೇರಿ ಐವರ ಬಂಧನ
ಗಾಯಗೊಂಡ ಡಿಚ್ಚಿ ಮುಬಾರಕ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ಮುಬಾರಕ್‌ನ ಸಹಚರರಾದ ಜಹೀರ್, ರೆಹಮತ್ ಪಾಷಾ, ಜುನೈದ್ ಮತ್ತು ಮನುಸಿಂಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಎಸ್‌ಪಿ ಬಿ.ನಿಖಿಲ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
"
ಪಿಎಸ್‌ಐ ಕೃಷ್ಣಕುಮಾರ್ ಅವರ ಮೇಲೆ ರೌಡಿ ಡಿಚ್ಚಿ ಮುಬಾರಕ್ ಪುನಃ ದಾಳಿಗೆ ಮುಂದಾಗಿದ್ದ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಶರಣಾಗದೇ ಚಾಕುವಿನಿಂದ ಇರಿಯಲು ಮುಂದಾದಾಗ ಅಧಿಕಾರಿಗಳು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.