ದೆಹಲಿ ಒಪ್ಪಂದ ವಿರೋಧಿಸಿದ್ದ ನಾಯಕ | Martyrs' Day

ಭದ್ರಾವತಿಯಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿದರು. ಕೆ.ಎಚ್.ತೀರ್ಥಯ್ಯ, ಮಧುರಾ ಶಿವಾನಂದ, ಸರಸ್ವತಿ ವಿಜಯಕುಮಾರ್ ಇತರರಿದ್ದರು.
ಭದ್ರಾವತಿಯಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿದರು. ಕೆ.ಎಚ್.ತೀರ್ಥಯ್ಯ, ಮಧುರಾ ಶಿವಾನಂದ, ಸರಸ್ವತಿ ವಿಜಯಕುಮಾರ್ ಇತರರಿದ್ದರು.
Published on
ಭದ್ರಾವತಿ: ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ಮಹಾನ್ ದಾರ್ಶನಿಕ. ಲಿಯಾಕತ್-ನೆಹರು ಒಪ್ಪಂದ (ದೆಹಲಿ ಒಪ್ಪಂದ)ದಿಂದ ಭವಿಷ್ಯದಲ್ಲಿ ಉಂಟಾಗುವ ದುಷ್ಪರಿಣಾಮಗಳನ್ನು ಒಪ್ಪಂದದ ಸಂದರ್ಭದಲ್ಲಿಯೇ ಮುಖರ್ಜಿ ಕಂಡುಕೊಂಡಿದ್ದರು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಹೇಳಿದರು.
ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಅಂಗವಾಗಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದಲ್ಲಿ ಇಂದಿಗೂ ಹಿಂದೂಗಳ ನರಮೇಧ ನಡೆಯುತ್ತಿದೆ. ಆರ್ಟಿಕಲ್ 370 ವಿಧಿ ಅಸಾಂವಿಧಾನಿಕ. ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನಿ, ಎರಡು ಚಿಹ್ನೆ ನಡೆಯುವುದಿಲ್ಲ ಎಂಬುದನ್ನು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿಯೇ ತಮ್ಮ ಬದುಕಿನ ಕೊನೆಯವರೆಗೂ ಹೋರಾಟ ನಡೆಸಿ ಪ್ರಾಣ ತ್ಯಜಿಸಿದರು. ಇಂತಹ ನಾಯಕನನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ ಎಂದರು.
ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ, ಜಿಲ್ಲಾ ಕಾರ್ಯದರ್ಶಿ ಸರಸ್ವತಿ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಲತಾ ಭೂಪಾಳಂ, ಜಿಲ್ಲಾ ಪ್ರಮುಖರಾದ ಪುಷ್ಪಲತಾ, ವಿನುತಾ ಶಾಸ್ತ್ರಿ, ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಸುರೇಶಪ್ಪ, ಸುಲೋಚನಾ ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net