ಕವಿ ಹೃದಯಿ, ಸ್ನೇಹಮಯಿ ವ್ಯಕ್ತಿತ್ವದ ನಾಯಕ

ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಟಲ್ ಜೀ ಜನ್ಮದಿನದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ, ಸಿದ್ಲಿಂಗಪ್ಪ, ಗಾಯತ್ರಿ ಮಲ್ಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಟಲ್ ಜೀ ಜನ್ಮದಿನದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ, ಸಿದ್ಲಿಂಗಪ್ಪ, ಗಾಯತ್ರಿ ಮಲ್ಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.
Published on
ಶಿಕಾರಿಪುರ: ಬದುಕಿನುದ್ದಕ್ಕೂ ಸಹೃದಯತೆಯನ್ನೇ ಹಂಚಿ ಅಜಾತಶತ್ರು ಅನಿಸಿಕೊಂಡವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಐದಾರು ದಶಕಗಳ ಸಾಮಾಜಿಕ, ರಾಜಕೀಯ ಜೀವನದಲ್ಲಿ ತಮ್ಮದೇ ಆದ ಶಿಸ್ತು, ಅನುಶಾಸನದ ನಡುವೆ ಪರಿಶುದ್ಧ ಬದುಕು ನಡೆಸಿದವರು ಅಟಲ್ ಜೀ. ಅವರು ನುಡಿದಂತೆ ನಡೆದವರು ಎಂದು ತಿಳಿಸಿದರು.
ಭಾರತದ ಸಂಸತ್‌ನಲ್ಲಿ ಸ್ನೇಹಮಯಿಯಾಗಿ, ಕವಿಹೃದಯಿಯಾಗಿ, ಎಲ್ಲ ಪಕ್ಷದವರಿಂದಲೂ ಒಬ್ಬ ಶ್ರೇಷ್ಠ ಸಂಸದೀಯ ಪಟು ಎಂದು ಕರೆಯಿಸಿಕೊಂಡಿದ್ದರು. ಯಾವತ್ತೂ ಅಧಿಕಾರದ, ಅಹಂಕಾರದ ಅಂಗಳಕ್ಕೆ ಜಾರಿಕೊಳ್ಳದ ಅಟಲ್ ಜೀ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು ಎಂದರು.
ದೇಶದ ಅಖಂಡತೆಗೆ, ರಾಷ್ಟ್ರೀಯತೆಗೆ ಧಕ್ಕೆ ಬಂದಾಗ ಅವರು ಕಠೋರ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಟಲ್ ಜೀ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅವರ ಸಮರ್ಥವಾದ ಆಡಳಿತದಲ್ಲಿ ಜಾರಿಗೆ ತಂದ ಹಲವಾರು ಜನಪರವಾದ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಳದಿಂದ ಬಂದ ಅಟಲ್ ಜೀ ಅಪ್ರತಿಮ ದೇಶಭಕ್ತರು. ಪ್ರಖರ ಹಿಂದುತ್ವವಾದಿ ಆಗಿದ್ದರು. ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಪೂರ್ತಿ. ಸಹನೆ, ಸಂಯಮಶೀಲತೆ, ಸರ್ವರನ್ನು ಪ್ರೀತಿಸುವುದು ಅವರ ಪ್ರಮುಖ ಗುಣಗಳು. ಸಂಘಟನೆ ಅವರ ಪ್ರಮುಖ ಧ್ಯೇಯವಾಗಿತ್ತು ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಿದ್ಲಿಂಗಪ್ಪ, ಗಾಯತ್ರಿ ಮಲ್ಲಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net