ಭದ್ರಾ ತೀರದಲ್ಲಿ ಅದ್ದೂರಿ ಗಂಗಾರತಿ

ಗಂಗಾಪರಮೇಶ್ವರಿ ದೇವಿ ಕಾರ್ತಿಕೋತ್ಸವದ ಅಂಗವಾಗಿ ಹೊಳೆಹೊನ್ನೂರು ಪಟ್ಟಣದಲ್ಲಿ ಭದ್ರಾ ನದಿ ದಡದಲ್ಲಿ ನೆರವೇರಿದ ಗಂಗಾರತಿ.
ಗಂಗಾಪರಮೇಶ್ವರಿ ದೇವಿ ಕಾರ್ತಿಕೋತ್ಸವದ ಅಂಗವಾಗಿ ಹೊಳೆಹೊನ್ನೂರು ಪಟ್ಟಣದಲ್ಲಿ ಭದ್ರಾ ನದಿ ದಡದಲ್ಲಿ ನೆರವೇರಿದ ಗಂಗಾರತಿ.
Published on
ಹೊಳೆಹೊನ್ನೂರು: ಪಟ್ಟಣದ ಶ್ರೀ ಗಂಗಾಪರಮೇಶ್ವರಿ ದೇವಿ ಕಾರ್ತಿಕೋತ್ಸವದ ಅಂಗವಾಗಿ ಭದ್ರಾನದಿ ದಡದಲ್ಲಿ ಸೋಮವಾರ ಶ್ರೀ ಗಂಗಾ ಮಾತೆಯ ತೆಪ್ಪೋತ್ಸವ, ಗಂಗಾರತಿ ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಶ್ರೀ ದೇವಿಗೆ ಪುಣ್ಯತೀರ್ಥ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ನಂತರ ಮಂಗಳಾರತಿ ಮಾಡಲಾಯಿತು. ಸಂಜೆ ಗ್ರಾಮದೇವತೆ ಶ್ರೀದೇವಿ ಹೊನ್ನೂರಮ್ಮ ಹಾಗೂ ಗಂಗಾ ದೇವಿ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಭದ್ರಾ ನದಿ ದಡದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಶ್ರೀ ಹೊನ್ನೂರಮ್ಮ ಉತ್ಸವ ಮೂರ್ತಿಪ್ರತಿಷ್ಠಾಪಿಸಲಾಯಿತು. ಪುಷ್ಪ, ವಿದ್ಯುತ್ ದೀಪಾಲಂಕೃತ ತೆಪ್ಪದಲ್ಲಿ ಗಂಗಾ ದೇವಿ ತೆಪ್ಪೋತ್ಸವ ನೆರವೇರಿತು.
ಪಂಡಿತ್ ನವರತ್ನ ಶ್ರೀನಿವಾಸಾಚಾರ್ ನೇತೃತ್ವದಲ್ಲಿ ರಾಯಚೂರು ಕೃಷ್ಣಾಚಾರ್, ಪುಷ್ಕರ್ ಬಲಗಾರ್, ಕಲ್ಲಾಪುರ ಸುಮೇಧಾಚಾರ್ ಗಂಗಾರತಿ ನಡೆಸಿಕೊಟ್ಟರು. ನವರತ್ನ ಸುಬ್ಬಣ್ಣಾಚಾರ್, ದೇವಸ್ಥಾನ ಸಮಿತಿ ಮುಖಂಡರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net