ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ ಸೇರಿ 2000 ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೂ ದರ್ಶನ ಸುಲಭವಾಗಿರಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲೇ ನಿಲ್ಲಬೇಕಾಯಿತು. ಇದರ ಮಧ್ಯೆ ಹೆಚ್ಚು ಪಾಸ್‌ಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂತು. ಹಣ ಕೊಟ್ಟು ವಿಶೇಷ ಪೂಜೆ ಪಾಸ್ ಪಡೆದವರು ಹಾಗೂ ಬರೀ ದರ್ಶನಕ್ಕೆ ಶಿಾರಸು ಪಾಸು ಪಡೆದವರು ಇಬ್ಬರನ್ನೂ ಒಂದೇ ಸರದಿಯಲ್ಲಿ ನಿಲ್ಲಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು, ಎಸಿ ವೀರೇಶ್‌ಕುಮಾರ್, ಎಎಸ್ಪಿ ಡಾ. ಬೆನಕಪ್ರಸಾದ್, ತಹಸೀಲ್ದಾರ್ ರಶ್ಮಿ ಹಾಲೇಶ್, ಮಾರಿಕಾಂಬಾ ನ್ಯಾಸ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಟಿ.ವಿ.ಪಾಂಡುರಂಗ, ರವಿನಾಯ್ಡು, ಗಂಗಾಧರ ಜಂಬಿಗೆ ಇತರರು ಸ್ಥಳದಲ್ಲಿದ್ದರು.