ಗಾಳಿ ಮಳೆಗೆ ಸಿಲುಕಿ ಹಾನಿಗೀಡಾದ 35 ಗ್ರಾಮಗಳಲ್ಲಿ ಮನೆಗಳ ಸರ್ವೇ ಕಾರ್ಯ ಸಂಪೂರ್ಣವಾಗಿದೆ. ಹೊಳೆಹೊನ್ನೂರು, ಆನವೇರಿ, ಕಲ್ಲಿಹಾಳ್ ಹೋಬಳಿ ವ್ಯಾಪ್ತಿಯ 35 ಹಳ್ಳಿಗಳಲ್ಲಿ ಬರೋಬ್ಬರಿ 600 ಮನೆಗಳಿಗೆ ಹಾನಿ ಉಂಟಾಗಿದೆ. ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ವಡ್ಡರಹಟ್ಟಿಯಲ್ಲಿ ಹೆಚ್ಚು ಮನೆಗಳಿಗೆ ಭಾಗಶ@ ಹಾನಿ ಉಂಟಾಗಿದೆ. ಮನೆಗಳ ಸರ್ವೇ ಕಾರ್ಯ ಮುಕ್ತಾಯವಾದ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಮರಳು, ಜಲ್ಲಿ, ಸಿಮೆಂಟ್ ಸೇರಿ ದುರಸ್ತಿಗೆ ಬೇಕಾದ ಸಾಮಗ್ರಿ ಜೋಡಿಸುತ್ತಿದ್ದಾರೆ. ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.