ಸಾವಿರಾರು ಜನರ ಬದುಕು ರೂಪಿಸಿದ ಕಾಲೇಜು

ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಅವರನ್ನು ಅಭಿನಂದಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಇಂದೂಧರ ಬೇಸೂರು, ಚಂದ್ರಪ್ಪ, ಲೋಕೇಶ್ ಇತರರಿದ್ದರು.
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಅವರನ್ನು ಅಭಿನಂದಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಇಂದೂಧರ ಬೇಸೂರು, ಚಂದ್ರಪ್ಪ, ಲೋಕೇಶ್ ಇತರರಿದ್ದರು.
Published on
ಸಾಗರ: ಸರ್ಕಾರಿ ಜೂನಿಯರ್ ಕಾಲೇಜು ಸಾವಿರಾರು ಜನರ ಬದುಕು ರೂಪಿಸಿದ್ದು ಐದು ದಶಕದಿಂದ ಉತ್ತಮ ಶಿಕ್ಷಣ ಸೇವೆ ಕಲ್ಪಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಕುರಿತ ಪುರದ ಪುಣ್ಯ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಶೈಕ್ಷಣಿಕವಾಗಿ ಸಾಗರ ತಾಲೂಕಿನಲ್ಲಿ ಉತ್ತಮ ವಾತಾವರಣ ಇದ್ದು, ಅದಕ್ಕೆ ಪೂರಕವಾದ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.
ಕೆ.ಸಿ.ಸತ್ಯನಾರಾಯಣ ಅವರು ಪ್ರಾಚಾರ್ಯರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸತ್ಯನಾರಾಯಣ ಅವರ ಕುರಿತು ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಭಿನಂದನಾ ಕೃತಿ ತಂದಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕೆ.ಸಿ.ಸತ್ಯನಾರಾಯಣ ದಂಪತಿಗೆ ಅಭಿನಂದಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ಚಂದ್ರಪ್ಪ, ಲೋಕೇಶ್, ಭವ್ಯಾ ಕೃಷ್ಣಮೂರ್ತಿ, ಉಮೇಶ್, ಬಸವರಾಜ್, ಡಾ. ಸರ್ಫ್ರಾಜ್, ಚಂದ್ರಗುತ್ತಿ, ಡಾ. ಉಮೇಶ್,  ಪದ್ಮಾವತಿ ಭಟ್, ಪರಮೇಶ್ವರಪ್ಪ, ಡಾ. ಅನ್ನಪೂರ್ಣ, ಎಲ್.ಎಂ.ಹೆಗಡೆ, ವಿ.ಸಿ.ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net