ಆ ಬಳಿಕ ರೈತ(farmer) ಮಾ.20ರಿಂದ ಮೇ 15ರವರೆಗೆ ನಾಲ್ಕು ಹಂತದಲ್ಲಿ 9,91,081 ರೂ. ಅನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ. ಬಳಿಕ ರೈತ ಹಣ ವಿತ್ ಡ್ರಾ ಮಾಡಲು ಮುಂದಾದಾಗ ಶೇ.20ರಷ್ಟು ಹಣವನ್ನು ಕೊಟ್ಟರೆ ಮಾತ್ರ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದ. ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕೊಟ್ಟರೆ ಅದರಲ್ಲೇ ಶೇ.20ರಷ್ಟು ಹಣ ನೀಡುವುದಾಗಿ ರೈತ ಹೇಳಿದ್ದ. ಅದಾದ ಬಳಿಕ ವೆಬ್‌ಪೇಜ್ ಕ್ಲೋಸ್(webpage Close)ಆಗಿತ್ತು. ಅನುಮಾನಗೊಂಡು ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಗೆ ಕರೆ ಮಾಹಿತಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರೈತ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.