1.27 ಕೊಟಿ ರೂ. ದಂಡ ಸಂಗ್ರಹ !: ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪಿಎಸ್‌ಐ, ಎಎಸ್‌ಐ, ಮೇಲ್ಪಟ್ಟ ಅಧಿಕಾರಿಗಳು ಪ್ರತಿನಿತ್ಯವೂ ದಂಡ ಸಂಗ್ರಹ ಮಾಡುತ್ತಿದ್ದಾರೆ. ಈ ನಡುವೆ ಸರ್ಕಾರದ ಆದೇಶದ ಮೇರೆಗೆ ಬಾಕಿ ಇದ್ದ ಇ-ಚಲನ್ (E-challan)ದಂಡದ ಮೊತ್ತಕ್ಕೆ ಜೂ.21ರಿಂದ ಜು.10ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿತ್ತು. 20 ದಿನದಲ್ಲಿ 30,218 ಇ-ಚಲನ್ ಪ್ರಕರಣಗಳಲ್ಲಿ 1,27,95,250 ರೂ. ದಂಡವನ್ನು ಸವಾರರು ಪಾವತಿಸಿದ್ದಾರೆ.