ಬಂಟೋಡಿ ಕಾಲು ಸೇತುವೆಗೆ 25 ಲಕ್ಷ ರೂ.

ಹೊಸೂರು ಗ್ರಾಪಂನ ಬಂಟೋಡಿಯಲ್ಲಿ ಮೃತ ಯುವಕ ಪೂರ್ಣೇಶ್ ಕುಟುಂಬಕ್ಕೆ ಶಾಸಕ ಆರಗ ಜ್ಞಾನೇಂದ್ರ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಭರತರಾಜ್, ಗಣಪತಿ, ಸತ್ಯನಾರಾಯಣ ಭಟ್, ಬಸವರಾಜ ಹೊದಲ ಇತರರಿದ್ದರು.
ಹೊಸೂರು ಗ್ರಾಪಂನ ಬಂಟೋಡಿಯಲ್ಲಿ ಮೃತ ಯುವಕ ಪೂರ್ಣೇಶ್ ಕುಟುಂಬಕ್ಕೆ ಶಾಸಕ ಆರಗ ಜ್ಞಾನೇಂದ್ರ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಭರತರಾಜ್, ಗಣಪತಿ, ಸತ್ಯನಾರಾಯಣ ಭಟ್, ಬಸವರಾಜ ಹೊದಲ ಇತರರಿದ್ದರು.
Published on
ಹೊಸನಗರ: ಬಂಟೋಡಿ ದುರಂತ ಮತ್ತೆ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಚಕ್ರಾ ಹಿನ್ನೀರಿಗೆ ಅಡ್ಡಲಾಗಿ ಕಾಲು ಸೇತುವೆ ನಿರ್ಮಿಸಲು 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ತಾಲೂಕಿನ ಹೊಸೂರು ಸಂಪೆಕಟ್ಟೆ ಗ್ರಾಪಂ ವ್ಯಾಪ್ತಿಯ ಬಂಟೋಡಿಯಲ್ಲಿ ಸೆ.14ರಂದು ಉಕ್ಕಡ ಮಗುಚಿ ಮೃತಪಟ್ಟ ಪೂರ್ಣೇಶ್ ಕುಟುಂಬಕ್ಕೆ ಸರ್ಕಾರದ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ದುರಂತಗಳು ಮರುಕಳಿಸದ ರೀತಿ ಎಚ್ಚರಿಕೆ ವಹಿಸಬೇಕು. ಸಂತ್ರಸ್ತ ಕುಟುಂಬದ ಜತೆ ನಿಲ್ಲುವುದು ಸರ್ಕಾರದ ಜವಾಬ್ದಾರಿ ಎಂದರು.
ಮೃತರ ಕುಟುಂಬಕ್ಕೆ ಸಹಕಾರದ ಜತೆಗೆ ಹಿನ್ನೀರಿನೊಂದಿಗೆ ಬದುಕು ಸಾಗಿಸುತ್ತಿರುವ ಕುಟುಂಬಗಳ ಸುರಕ್ಷೆ ದೃಷ್ಟಿಯಿಂದ ಕಾಲುಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಬೇಸಿಗೆ ಕಳೆಯುವುದರೊಳಗೆ ಕಾಲು ಸೇತುವೆ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಭರತರಾಜ್, ಗ್ರಾಪಂ ಅಧ್ಯಕ್ಷ ಗಣಪತಿ, ಸದಸ್ಯ ಸತ್ಯನಾರಾಯಣ ಭಟ್, ಶಾಸಕರ ಆಪ್ತ ಸಹಾಯಕ ಬಸವರಾಜ ಹೊದಲ, ರಾಜೇಶ್ ಹಿರೀಮನೆ, ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ, ಎಚ್.ಜಿ.ರಮಾಕಾಂತ್, ವಿವೇಕ್ ಕಾಮತ್, ಲಕ್ಷ್ಮೀನಾರಾಯಣ ಕೊಳಕಿ, ರಾಘವೇಂದ್ರ ಉಡುಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net