17.28 ಲಕ್ಷ ರೂ. ಮೌಲ್ತದ ಕೀಟನಾಶಕ ಜಪ್ತಿ । Illegal pesticide

ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ 17.28 ಲಕ್ಷ ರೂ. ಮೌಲ್ಯದ ಅಕ್ರಮ ಕೀಟನಾಶಕವನ್ನು ಜಪ್ತಿ ಮಾಡಿದರು. ಜಗದೀಶ್ ಯಾದವ ಬಾಬು, ಬಿ.ಸಿ.ಶಶಿಧರ್, ಗಿರಿಜಾ ಪಟ್ಟಣಶೆಟ್ಟಿ, ಸಿ.ಜೆ.ಚೇತನ್, ಸುನೀಲ್ ಇದ್ದರು.
ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ 17.28 ಲಕ್ಷ ರೂ. ಮೌಲ್ಯದ ಅಕ್ರಮ ಕೀಟನಾಶಕವನ್ನು ಜಪ್ತಿ ಮಾಡಿದರು. ಜಗದೀಶ್ ಯಾದವ ಬಾಬು, ಬಿ.ಸಿ.ಶಶಿಧರ್, ಗಿರಿಜಾ ಪಟ್ಟಣಶೆಟ್ಟಿ, ಸಿ.ಜೆ.ಚೇತನ್, ಸುನೀಲ್ ಇದ್ದರು.
Published on
ಶಿವಮೊಗ್ಗ: ಕೃಷಿ ಇಲಾಖೆಯ ಜಾಗೃತದಳ(Vigilance)ದ ಅಧಿಕಾರಿಗಳು ನಗರದ ಕೀಟನಾಶಕ(Insecticide) ಮಳಿಗೆಯೊಂದರ ಮೇಲೆ 17.28 ಲಕ್ಷ ರೂ. ಮೌಲ್ಯದ ಅಕ್ರಮ ಕೀಟನಾಶಕವನ್ನು ಜಪ್ತಿ ಮಾಡಿದರು. 
ವಿನೋಬನಗರ 60 ಅಡಿ ರಸ್ತೆಯ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್(Ultima Search) ಮೇಲೆ ದಾಳಿ ಮಾಡಿದ ಜಾಗೃತ ದಳ ತಂಡ ಮಳಿಗೆಯಲ್ಲಿ ಗುಜರಾತ್ ಕಂಪನಿ(Gujarat company)ಯ ರ‌್ಯಾಟಲ್ ಎಂಬ 1008 ಕೆಜಿ ಅಲ್ಟಿಮ ಸರ್ಚ್ ವಾಪಿ ಕೀಟ(ಪೀಡೆ)ನಾಶಕವನ್ನು ದಾಸ್ತಾನು ಮಾಡಿದ್ದು, ಅದು ಸಿಐಆರ್(CIR) ಸಂಖ್ಯೆ ಹಾಗೂ ತಯಾರಿಕಾ ಪರವಾನಗಿ ಸಂಖ್ಯೆ ನಮೂದಿಸದೇ ದಾಸ್ತಾನು ಮಾಡಲಾಗಿತ್ತು. ಅಲ್ಲದೇ ಮಾರಾಟ ಮಾಡಲಾಗುತ್ತಿತ್ತು. ಇದರ ಖಚಿತ ಮಾಹಿತಿ ಅರಿತ ಜಾಗೃತ ದಳ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಇದು ಕೀಟನಾಶಕ ಅಧಿನಿಯಮ 1968 ಹಾಗೂ ಕೀಟ ನಾಶಕ ಕಾಯ್ದೆ 1971 ಉಲ್ಲಘಂನೆ ಆಗಿರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯು ಮೈಸೂರು ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಮೈಸೂರಿನ ಸಹಾಯಕ ಕೃಷಿ ನಿರ್ದೇಶಕರಾದ ಜಗದೀಶ್ ಯಾದವ ಬಾಬು, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ಶಶಿಧರ್(ಶಿವಮೊಗ್ಗ ಜಾಗೃತ ಕೋಶ) ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣಶೆಟ್ಟಿ, ತಾಂತ್ರಿಕ ಅಧಿಕಾರಿ ಸಿ.ಜೆ. ಚೇತನ್, ಕೃಷಿ ಅಧಿಕಾರಿ ಸುನೀಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net