ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶವಿದೆ. ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ. ಕಳೆದ ಜೂ.16ರ ಮತಪಟ್ಟಿಯಲ್ಲಿದ್ದಂತೆ ತಾಲೂಕಿನಲ್ಲಿ 1,98,955 ಮತದಾರರಿದ್ದು, ಅವರಲ್ಲಿ 1,82,746 ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಪೂರ್ಣಗೊಳಿಸಲಾಗಿದೆ. ಶೇ.91.85ರಷ್ಟು ಪರಿಷ್ಕರಣೆ ಪೂರ್ಣವಾಗಿದೆ. 16,209 ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಇವರ ಹೆಸರು ಕರಡು ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 5,759 ಮಂದಿ ಮೃತಪಟ್ಟಿರುವುದು, 1,093 ಮತದಾರರು ಗೈರಾಗಿರುವುದನ್ನು ಹಾಗೂ 7822 ಮತದಾರರು ಸ್ಥಳಾಂತರ ಆಗಿರುವುದನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.