ಹಿಂದಿನ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಅವರ ಅವಧಿಯಲ್ಲಿ ಈ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭವಾಗಿತ್ತು. ಹಳೇ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಲ್ಲದೆ, ಬೇರೆ ಬೇರೆ ಬ್ಯಾಂಕ್‌ಗಳು, ರಾಜಕೀಯ ಪಕ್ಷ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳೂ ಇದ್ದವು. ಅವರಿಗೆ ಗಾರ್ಡನ್ ಏರಿಯಾದ ಪಾಲಿಕೆಯ ಹೊಸ ವಾಣಿಜ್ಯ ಸಂಕಿರ್ಣದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು. ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ಎಸ್.ಜ್ಞಾನೇಶ್ವರ, ದೀನ್‌ದಯಾಳ್, ಶ್ರೀನಾಗ, ಮುರಳಿ, ವಿಶ್ವನಾಥ್, ಎನ್.ಜೆ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.