

ಶಿವಮೊಗ್ಗ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಒಂದು ವರ್ಷದ ಹೆಣ್ಣು ಮಗು ಸಾವಿಗೀಡಾಗಿರುವ ಘಟನೆ ಸಾಗರ ತಾಲೂಕಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ತುಮರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿಯ ರಾಜು ಎಂಬುವರ ಒಂದು ವರ್ಷದ ಪುತ್ರಿ ಯಲ್ಲಮ್ಮ ಮೃತ ಮಗು. ಹಿಂದಿನಿಂದಲೂ ಉಸಿರಾಟದ ತೊಂದರೆಯಿಂದ ಮಗು ಬಳಲುತ್ತಿತ್ತು.
ಉಸಿರಾಟ ತೊಂದರೆ ಕರೊನಾ ವೈರಸ್ ಲಕ್ಷಣವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಗುವಿನ ಗಂಟಲು ದ್ರವದ ಮಾದರಿಯನ್ನು ಕರೊನಾ ಟೆಸ್ಟ್ಗಾಗಿ ಶಿವಮೊಗ್ಗದ ಮೆಗ್ಗಾನ್ ವಿಡಿಆರ್ ಲ್ಯಾಬ್ಗೆ ಸಾಗರದ ವೈದ್ಯರು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)