

ಚನ್ನಮ್ಮನ ಕಿತ್ತೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ವಿಚಾರವಾಗಿ ಸಂವಿಧಾನ ಬದಲಾವಣೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತಿದೆ. ಸಂವಿಧಾನಕ್ಕೆ ಅಗೌರವ ತರುವ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ತಾಲೂಕಾಧ್ಯ ಶ್ರೀಕರ ಕುಲಕರ್ಣಿ, ಲ$್ಮ ಇನಾಮದಾರ ಮಾತನಾಡಿ, ಕಾಂಗ್ರೆಸ್ ಜನರ ಮಧ್ಯೆ ಜಗಳ ಹಚ್ಚುತ್ತಿದೆ ಎಂದರು.
ಬಿಜೆಪಿ ಮುಖಂಡ ಬಸವರಾಜ ಪರವಣ್ಣನವರ, ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಅಪ್ಪಣ್ಣ ಪಾಗಾದ, ಶಿವಾನಂದ ಹನುಮಸಾಗರ,
ಬಸವರಾಜ ಮಾತ್ನವರ, ರವಿರಾಜ ಇನಾಮದಾರ, ರಮೇಶ ಉಗರಖೋಡ್, ಸಿದ್ದು ಬೋಳನ್ನವರ, ದಿನೇಶ ವಳಸಂಗ ಇತರರಿದ್ದರು.