ಶಿವನ ಆರಾಧನೆಗೆ ಮೊಳಕಾಲ್ಮೂರು ದೇಗುಲಗಳು ಸಜ್ಜು

mlk
Published on

ಮೊಳಕಾಲ್ಮೂರು: ಮಹಾ ಶಿವರಾತ್ರಿ ಅಂಗವಾಗಿ ತಾಲೂಕಿನಾದ್ಯಂತ ಬುಧವಾರ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಮಾರ್ಕಂಡೇಯ ದೇವಸ್ಥಾನ, ನುಂಕೆಮಲೆ ಸಿದ್ದೇಶ್ವರಸ್ವಾಮಿ, ವೆಂಕಟರಮಣಸ್ವಾಮಿ, ಅಶೋಕ ಸಿದ್ದಾಪುರದ ಬ್ರಹ್ಮಗಿರಿ ಬೆಟ್ಟ, ದೇವಸಮುದ್ರದ ಜಟ್ಟಂಗಿ ರಾಮೇಶ್ವರ ಬೆಟ್ಟ, ಬಾಂಡ್ರಾವಿ ಆಂಜನೇಯಸ್ವಾಮಿ, ಕೊಂಡ್ಲಹಳ್ಳಿ, ಕೋನಸಾಗರ, ಬಿಜಿಕೆರೆ, ರಾಂಪುರ, ನಾಗಸಮುದ್ರ, ತುಮಕೂರ‌್ಲಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ದೇಗುಲದಲ್ಲಿ ಶಿವನ ಆರಾಧನೆ ನಡೆಯಲಿದೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಪಾಹಾರ, ಪಾನಕ, ಮಜ್ಜಿಗೆ ಹಾಗೂ ಹಣ್ಣಿನ ಪ್ರಸಾದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ದೇವಸಮುದ್ರ ಸಮೀಪ ಬೆಟ್ಟದ ತಪ್ಪಲಿನಲ್ಲಿರುವ 101 ದೇವ ಗಣವುಳ್ಳ ಪುಣ್ಯ ಕ್ಷೇತ್ರದಲ್ಲಿ ಭಕ್ತರು ರಾತ್ರಿ ಭಜನೆ, ಶಿವನ ಆರಾಧನೆಯಲ್ಲಿ ತೊಡಗುವ ಮೂಲಕ ಜಾಗರಣೆ ಮಾಡಲಿದ್ದಾರೆ. ಬೆಳಗ್ಗೆ ದೇವರಿಗೆ ಪೂಜೆ ಸಲ್ಲಿಸಿ, ನಂತರ ತಮ್ಮ ಊರಿಗೆ ಹಿಂತಿರುಗಲಿದ್ದಾರೆ. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net