

ಸರಗೂರು: ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಂದೇಗಾಲ ಶಿವರಾಜು (ವಕೀಲ) ಬಹುಮತದಿಂದ ಆಯ್ಕೆಗೊಂಡರು.
ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು ಅವರನ್ನು ಸನ್ಮಾನಿಸಲಾಯಿತು.
ಜುಲೈ ತಿಂಗಳಲ್ಲಿ ಆನ್‌ಲೈನ್ ಮೂಲಕ ನಡೆದ ಚುನಾವಣೆಯಲ್ಲಿ ಕಂದೇಗಾಲ ಶಿವರಾಜು 2,255 ಮತಗಳನ್ನು ಪಡೆದು ಭರ್ಜರಿಗೆ ಜಯ ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಹುಣಸಹಳ್ಳಿ ಶಶಿ ಪಟೇಲ್ 1,827 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಸರಗೂರು ತಾಲೂಕಿನ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಸಹಳ್ಳಿ ನವೀನ್ 814 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಲಂಕೆ ಮಹದೇವಸ್ವಾಮಿ 593 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಎಚ್.ಡಿ.ಕೋಟೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಕ್ಕೋಡನಹಳ್ಳಿ ಅಜರುದ್ದೀನ್ 1,679 ಮತಗಳನ್ನು ಪಡೆದು ಜಯ ಗಳಿಸಿದರೆ ಪ್ರತಿಸ್ಪರ್ಧಿ ಹೊಸಹೊಳಲು ಮನೋಜ್ 1061 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕಳಸೂರು ಬಸವರಾಜು ಆಯ್ಕೆಯಾದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದೇಗಾಲ ಶಿವರಾಜು, ನನ್ನ ಗೆಲುವಿಗೆ ಹಗಲಿರುಳು, ಬಿಸಿಲು, ಮಳೆಗೆ ಹೆದರದೆ ಪ್ರಾಮಾಣಿಕವಾಗಿ ದುಡಿದ ನನ್ನ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಜತೆಯಲ್ಲಿ ಇರುತ್ತೇನೆ ಎಂದರು.
ಪಪಂ ಸದಸ್ಯ ಶ್ರೀನಿವಾಸ, ಜಿಲ್ಲಾ ಮಾಜಿ ಪಂಚಾಯಿತಿ ಸದಸ್ಯ ನರಸೀಪುರ ರವಿ, ಅಕ್ರಮ, ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಕಾಂಗ್ರೆಸ್ ಪಕ್ಷದ ಟೌನ್ ಹಾಗೂ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣ ಸ್ವಾಮಿ, ಮಣಿ, ಗ್ರಾಪಂ ಸದಸ್ಯ ಚಿನ್ನಸ್ವಾಮಿ, ವಿಜಯ್, ಲೋಕೇಶ್ ಮುಳ್ಳೂರು, ಮಸಹಳ್ಳಿ ಸೂರ್ಯ, ನಾಗೇಶ್, ನಾಗೇಂದ್ರ ಇತರರು ಹಾಜರಿದ್ದರು.