

ಮದ್ದೂರು: ಮಹಾ ಶಿವರಾತ್ರಿ ಪ್ರಯುಕ್ತ 89ನೇ ವರ್ಷದ ಶಿವ ಜಯಂತಿಯನ್ನ ಶಿವಪುರದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳ್ಳಿರಥದ ಮೆರವಣಿಗೆ ಹಾಗೂ 300 ಹಳ್ಳಿಗೆ ಶಿವನ ದಿವ್ಯ ಸಂದೇಶ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈಶ್ವರಿ ವಿಶ್ವವಿದ್ಯಾಲಯದ ಶಿವಪುರ ಸಂಚಾಲಕರಾದ ಈಶ್ವರಿ ಅಕ್ಕ ಅವರು ಬುಧವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯ ಸುಮಾರು 140 ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕದಲ್ಲಿ 600 ಸೇವಾ ಕೇಂದ್ರಗಳನ್ನು ಹೊಂದಿದ್ದು, ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯವು ವಿಶ್ವಸಂಸ್ಥೆಗೆ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗಾಗಿ ತಾವು ಪರಮಾತ್ಮನ ಕಾರ್ಯದಲ್ಲಿ ಯಾರು ಶಿವನನ್ನ ನೆನಪು ಮಾಡುತ್ತಾರೆ ಅವರ ಅನೇಕ ಜನ್ಮದ ಪಾಪಗಳು ನಾಶವಾಗುತ್ತದೆ ಎಂದರು.
ಪ್ರಜಾಪಿತ ಬ್ರಹ್ಮ ಕುಮಾರ ಈಶ್ವರಿ ವಿದ್ಯಾಲಯದ ರಾಘವೇಂದ್ರಣ್ಣ, ರತ್ನಕ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ, ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಧು, ಕೇಶವ, ಪವನ್ ಗುರೂಜಿ ಇದ್ದರು.