ಕೊಡಸೋಗೆ ಶಿವಬಸಪ್ಪ ವಿರೋಧ ಆಯ್ಕೆ

ಕೊಡಸೋಗೆ ಶಿವಬಸಪ್ಪ ವಿರೋಧ ಆಯ್ಕೆ
Published on

ಗುಂಡ್ಲುಪೇಟೆ: ತಾಲೂಕಿನ ಪಿಕಾರ್ಡ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೊಡಸೋಗೆ ಶಿವಬಸಪ್ಪ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಚನ್ನಮಲ್ಲಿಪುರ ಬಸವಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕೆ.ಎಸ್.ಶಿವಬಸಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಪದ್ಮನಾಭ್ ಪ್ರಕಟಿಸಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಉಪಾಧ್ಯಕ್ಷ ಕೂಸಯ್ಯ, ಮಾಜಿ ಅಧ್ಯಕ್ಷ ಬಸವಣ್ಣ, ಮಹೇಶ್, ಎನ್.ಮಲ್ಲೇಶ್, ಎಸ್.ಎಂ.ಮಲ್ಲಿಕಾರ್ಜುನ, ನಿರ್ದೇಶಕ ಮಹೇಶ್, ಈಶ್ವರಪ್ಪ, ಬಸವರಾಜು, ಶಿವಣ್ಣ, ಪ್ರಸಾದ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ಕಲ್ಲಳ್ಳಿ ಮಹೇಶ್, ಬಿ.ಪಿ.ರಾಜಶೇಖರ್, ಎಸ್.ಆರ್.ಎಸ್.ರಾಜಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net