ಪಠ್ಯೇತರ ಚಟುವಟಿಕೆಯಿಂದ ಯಶಸ್ಸು: ಬಹುಮಾನ ವಿತರಿಸಿ ಪ್ರದೀಪ್ ಕುಮಾರ್ ಕೆ.ಆರ್ ಅನಿಸಿಕೆ

shirva
ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ಪ್ರಧಾನ ಪ್ರಬಂಧಕ ಪ್ರದೀಪ್ ಕುಮಾರ್ ಕೆ.ಆರ್ ಮಾತನಾಡಿದರು.
Published on

ಶಿರ್ವ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಯ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅಗತ್ಯ. ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಾಗ ಜೀವನದಲ್ಲಿ ಯಶಸ್ಸಿನ ಜತೆಗೆ ಸಾಧನೆಯ ಮೆಟ್ಟಿಲು ಏರಲು ಸಾಧ್ಯ ಎಂದು ಕರ್ಣಾಟಕ ಬ್ಯಾಂಕ್‌ನ ಕ್ಲಸ್ಟರ್‌ಹೆಡ್ ಉಡುಪಿ ಪ್ರಧಾನ ಪ್ರಬಂಧಕ ಪ್ರದೀಪ್ ಕುಮಾರ್ ಕೆ.ಆರ್ ಹೇಳಿದರು.

ಶಿರ್ವದ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ಉಜಿರೆ ಶಾಖೆ ಮುಖ್ಯ ಪ್ರಬಂಧಕ ಜನಾರ್ದನ್ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಸೋನಾ ಎಚ್.ಸಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಅಭಿಲಾಷ್ ವಿದ್ಯಾರ್ಥಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಶ್ರೇಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net